

ಬೆಂಗಳೂರು: ಇದೀಗ ಕಾಂಗ್ರೆಸ್ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಟಿಕೆಟ್ ಯಾರಿಗೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದೆ. ಈ ಮೂಲಕ ಚುನಾವಣಾ ಕಣವನ್ನು ಮತ್ತಷ್ಟು ರೋಚಕವಾಗಿದೆ. ಈಗ ಎರಡು ಪಟ್ಟಿಗಳಲ್ಲಿ ಬಾಕಿಯಾಗಿದ್ದ 43 ಕ್ಷೇತ್ರಗಳನ್ನು ಮೂರನೇ ಪಟ್ಟಿಯಲ್ಲಿ ಘೋಷಿಸಲಾಗಿದ್ದು 15 ಕ್ಷೇತ್ರಗಳು ಬಾಕಿ ಉಳಿದಿವೆ.
ಈ ಬಾರಿ ಐದು ಹಾಲಿ ಕಾಂಗ್ರೆಸ್ ಶಾಸಕರ ಟಿಕೆಟ್ ಕಥೆ ಏನು ಎನ್ನುವುದು ತಿಳಿದುಬಂದಿದೆ. ಈ ಹಿಂದೆ ಕುಂದಗೋಳ, ಹರಿಹರ, ಪುಲಕೇಶಿ ನಗರ,ಶಿಡ್ಲಘಟ್ಟ, ಲಿಂಗಸೂಗುರು ಟಿಕೆಟ್ ಬಾಕಿ ಇಡಲಾಗಿತ್ತು. ಈ ಸಂಬಂಧಿತ ಕಾಂಗ್ರೆಸ್ ನಿರ್ಧಾರ ಈಗ ಹೊರಬಿದ್ದಿದೆ.
ಕುಂದಗೋಳದಲ್ಲಿ ಇದೀಗ ಹಾಲಿ ಹಾಲಿ ಶಾಸಕಿ ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಲಾಗಿದೆ. ಅದಲ್ಲದೇ ಅಥಣಿ ಕ್ಷೇತ್ರಕ್ಕೆ ಬಿಜೆಪಿಯಿಂದ ಹಾರಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಾಗಿದೆ. ಕೋಲಾರಕ್ಕೆ ಕೊತ್ತನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದ್ದು ಮತ್ತೆ ನಾಲ್ಕು ಶಾಸಕರ ಹಾಲಿ ಕ್ಷೇತ್ರಗಳು ಖಾಲಿ ಉಳಿದಿವೆ.
ಅದಲ್ಲದೇ ಸಿದ್ದರಾಮಯ್ಯಗೆ ಕೋಲಾರದಿಂದ ಟಿಕೆಟ್ ನೀಡಲಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಎರಡು ಟಿಕೆಟ್ ಬಯಸಿದ್ದರು. ಆದರೆ ಈಗ ಒಂದೆ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಫರ್ಧೆ ಮಾಡುವುದಕ್ಕೆ ಅವಕಾಶ ಲಭಿಸಿದೆ.
ಚಿಕ್ಕಪೇಟೆಯಲ್ಲಿ ಆರ್ ವಿ ದೇವರಾಜ್ ಗೆ ಟಿಕೆಟ್ ನೀಡಲಾಗಿದ್ದು ಇದರಿಂದಾಗಿ ಕಾಂಗ್ರೆಸ್ಸಿನಲ್ಲಿ ಆಕಾಂಕ್ಷಿಗಳ ಬಂಡಾಯ ಸಾಧ್ಯತೆ ಇದೆ. ದಾಸರಹಳ್ಳಿಯಲ್ಲಿ ಧನಂಜಯ ಗೌಡಗೆ ಟಿಕೆಟ್ ನೀಡಲಾಗಿದ್ದು ಇಲ್ಲಿ ಕೂಡ ಆಕಾಂಕ್ಷಿಗಳು ಬಂಡಾಯ ಸಾಧ್ಯತೆ ಇದೆ ಎನ್ನಲಾಗಿದೆ. ತೆರದಾಳ ದಲ್ಲಿ ಉಮಾಶ್ರೀ ಗೆ ಟಿಕೆಟ್ ಮಿಸ್ ಆಗಿದ್ದು ಬೊಮ್ಮನಹಳ್ಳಿಯಲ್ಲಿ ಉಮಾಪತಿ ಶ್ರೀನಿವಾಸ್ ಗೌಡಗೆ ಟಿಕೆಟ್ ನೀಡಲಾಗಿದೆ.
ಬೆಳಗಾವಿ ಉತ್ತರದಲ್ಲಿ ಆಸೀಪ್ ಸೆಠ್ ಗೆ ಟಿಕೆಟ್ ನೀಡಲಾಗಿದೆ. ಈ ಹಿಂದೆ ಅನಿಲ್ ಬೆನಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಪ್ರಯತ್ನ ನಡೆಸಿದ್ದರು. ಆದರೆ ಇದೀಗ ಬೆಳಗಾವಿ ಉತ್ತರದಲ್ಲಿ ಆಸೀಪ್ ಸೆಠ್ ಗೆ ಟಿಕೆಟ್ ಕೊಟ್ಟಿರುವ ಹಿನ್ನೆಲೆಯಲ್ಲಿ ಅನಿಲ್ ಬೆನಕೆ ಕಾಂಗ್ರೆಸ್ ಸೇರ್ತಾರ ಇಲ್ಲ ಬಿಜೆಪಿಯಲ್ಲಿ ಉಳಿದುಕೊಳ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.