ಸೂರ್ಯ ಘರ್ ಫಲಾನುಭವಿಗಳಿಗೆ ಅಭಿನಂದನೆ

selco
Published on

ಉಳ್ಳಾಲ: ಪಿಎಂ ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆಯಡಿ ಸೋಲಾರ್ ಅಳವಡಿಸಿ ಸಬ್ಸಿಡಿ ಪಡೆದ 8 ಕುಟುಂಬಗಳನ್ನು ಸೆಲ್ಕೊ ಸಂಸ್ಥೆಯ ಮಂಗಳೂರು ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ಅಭಿನಂದಿಸಿದರು.

ಬಳಿಕ ಮಾತನಾಡಿದ ಸಂಸದರು, ನರೇಂದ್ರ ಮೋದಿ ಯಶಸ್ವಿ ಯೋಜನೆಯಲ್ಲಿ ಇದೂ ಒಂದಾಗಿದೆ. ಈ ಯೋಜನೆ ಬಗ್ಗೆ ನಗರ ಪಾಲಿಕೆಯ ಪ್ರತಿಯೊಬ್ಬ ಸದಸ್ಯರು ಜನರಿಗೆ ತಲುಪಿಸಿ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದರು.

ಕೆನರಾ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕಿ ರಮ್ಯಾ ಭಟ್, ಕೆವಿಜಿ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ರವಿತೇಜ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ, ಮನಪಾ ಮೇಯರ್ ಮನೋಜ್ ಕುಮಾರ್, ಮಾಜಿ ಮೇಯರ್ ಜಯಾನಂದ ಅಂಚನ್, ಸದಸ್ಯರಾದ ಜಯಲಕ್ಷ್ಮೀ, ವರುಣ್ ಚೌಟ, ಸೆಲ್ಕೋ ವಲಯ ವ್ಯವಸ್ಥಾಪಕರಾದ ಶೇಖರ್ ಶೆಟ್ಟಿ, ಸುರೇಶ್ ನಾಯ್ಕ ಮೊದಲಾದವರಿದ್ದರು.

ರವೀಣ ಬಿ. ಸ್ವಾಗತಿಸಿದರು. ಗುರುಪ್ರಕಾಶ್ ಶೆಟ್ಟಿ ಪ್ರಸ್ತಾವನೆಗೈದರು. ವಿನೋದ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net