ಉಳ್ಳಾಲ: ಸರ್ಕಾರಿ ಶಾಲಾ ಶಿಕ್ಷಕರು ಎಲ್ಲ ಮಕ್ಕಳನ್ನು ತಮ್ಮವರೆಂದು ಭಾವಿಸಿ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿ ಪ್ರಾಮಾಣಿಕತೆ, ಬದ್ಧತೆಯಿಂದ ಸೇವೆ ಸಲ್ಲಿಸಿದರೆ ಸರ್ಕಾರಿ ಶಾಲೆಗಳು ಮುಚ್ಚುವುದನ್ನು ತಡೆಯಬಹುದು ಎನ್ನುವುದಕ್ಕೆ ಜುಡಿತ್ ಸಲ್ದಾನ ಅವರೇ ಪ್ರತ್ಯಕ್ಷ ಸಾಕ್ಷಿ ಎಂದು ಬಂಧುತ್ವ ಚಾರಿಟೆಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಹೇಳಿದರು.
ಉಳ್ಳಾಲ ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾನಿಧಿ ಸಮಿತಿ, ಬಂಧುತ್ವ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಹೊರರಾಜ್ಯದ ಮಕ್ಕಳನ್ನು ಸೇರಿಸಿ ಮುಚ್ಚುವ ಹಂತದಲ್ಲಿದ್ದ ಬೋಳಾರ ವೆಸ್ಟ್ ಸರ್ಕಾರಿ ಹಿರಿಯ(ಉರ್ದು) ಪ್ರಾಥಮಿಕ ಶಾಲೆಯನ್ನು ಉಳಿಸಿದ ಮುಖ್ಯಶಿಕ್ಷಕಿ ಗೀತಾ ಜುಡಿತ್ ಸಲ್ದಾನ ಹಾಗೂ ಸಹಶಿಕ್ಷಕಿ ಸುಧಾ ಕುಂಬಾರದ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾನಿಧಿ ಸ್ಥಾಪಕಾಧ್ಯಕ್ಷ ಯಾದವ, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ಮಿಮಿಕ್ರಿ ರೇಹಮಾನ್ ಕೊಣಾಜೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧೀಕ್ಷಕ ಅಬ್ದುಲ್ ರವ್ೂ, ಬಿ.ಆರ್.ಅಂಬೇಡ್ಕರ್ ವಿಧ್ಯಾನಿಧಿ ಸಮಿತಿ ಸದಸ್ಯೆ ಉಮಾ ಉಪಸ್ಥಿತರಿದ್ದರು.