ವಂಚನೆ ಮಾಡುವ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿ

TPJP Strike
Published on

ಕಾರವಾರ: ವಂಚನೆ ಮಾಡುವ ಕಂಪನಿಗಳ ವಿರುದ್ಧ ಕ್ರಮ ವಹಿಸುವಂತೆ ಆಗ್ರಹಿಸಿ ವಂಚನೆ ಸಂತ್ರಸ್ಥ ಠೇವಣಿದಾರರ ಕುಟುಂಬ(ಟಿಪಿಜೆಪಿ) ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮೂಲಕ ಸಲ್ಲಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಸಂಘಟನೆಯ,ಕೃಷ್ಣ ಎಸ್.ನಾಯ್ಕ, ಗುರುಟೀಕ್‌ ನಂಥ ಹಲವು ಹಣಕಾಸು ಸಂಸ್ಥೆಗಳು ಜನರಿಗೆ ಹೆಚ್ಚುವರಿ ಬಡ್ಡಿಯ ಆಸೆ ತೋರಿಸಿ ಜನರಿಂದ ಕೋಟ್ಯಂತರ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿವೆ.

ಇಂಥ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿ ಠೇವಣಿದಾರರ ಹಣ ವಾಪಸ್ ಕೊಡಿಸುವ ಕೆಲಸವಾಗುತ್ತಿಲ್ಲ. ಇದರಿಂದ ದೇಶದಲ್ಲಿ ಸಾವಿರಾರು ಜನ ಪ್ರತಿ ವರ್ಷ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿದೆ ಎಂದರು.

ಇದನ್ನೂ ಓದಿ:ಅಪಘಾತದಲ್ಲಿ ಗಾಯಗೊಂಡಿದ್ದವ ಸಾವು
ಇಂಥ ಅನಧಿಕೃತ ಹಣಕಾಸು ಸಂಸ್ಥೆಗಳನ್ನು ನಿಯಂತ್ರಿಸಲು ಅನಿಯಂತ್ರಿತ ಠೇವಣಿ ಸಂಗ್ರಹಣೆ ನಿಷೇಧ ಕಾಯ್ದೆ (ಬಡ್ಸ್ ಆ್ಯಕ್ಟ್-2019)ನ್ನು ಜಾರಿಗೆ ತರಲಾಯಿತು. ಅನಧಿಕೃತವಾಗಿ ಠೇವಣಿ ಸಂಗ್ರಹಿಸುವ ಸಂಸ್ಥೆಗಳ ಆಸ್ತಿ ಮುಟ್ಟುಗೋಲು ಹಾಕುವ ಅಧಿಕಾರವನ್ನು ಕಾಯ್ದೆಯು ಜಿಲ್ಲಾಧಿಕಾರಿಗೆ ನೀಡುತ್ತದೆ. ಇಂಥ ಅಕ್ರಮ ತಡೆಯಲು ಒಬ್ಬ ಸಹಾಯಕ ಸಕ್ಷಮ ಅಧಿಕಾರಿಯನ್ನು ಸರ್ಕಾರ ನೇಮಿಸಬೇಕು.

ಫಾಸ್ಟ್ಟ್ರಾಕ್ ನ್ಯಾಯಾಲಯಗಳಲ್ಲಿ ವಿಶೇಷ ವಿಚಾರಣೆಗೆ ವ್ಯವಸ್ಥೆ ಮಾಡಬೇಕು. ಉತ್ತರ ಪ್ರದೇಶ, ಮಧ್ಯಪ್ರದೇಶದ ಕೆಲವು ಜಿಲ್ಲೆ ಬಿಟ್ಟು ಬೇರೆಲ್ಲೂ ಈ ಕಾಯ್ದೆಯ ವ್ಯವಸ್ಥಿತ ಜಾರಿಗೆ ಕ್ರಮವಾಗಿಲ್ಲ.

ಸಹಾಯಕ ಸಕ್ಷಮ ಅಽಕಾರಿಗಳ ನೇಮಕವಾಗಿಲ್ಲ ಎಂದು ದೂರಿದರು. ಎಚ್.ಎಫ್.ಕಾಡಪ್ಪನವರ್, ಪರಮೇಶ್ವರ ಹೆಗಡೆ, ದಿನೇಶ ಭಟ್, ಜಿ.ಕೆ.ಹೆಗಡೆ, ಎಂ.ಜಿ.ಹೆಗಡೆ, ಎಲ್.ಎಸ್.ಹೆಗಡೆ, ಎಸ್.ಜಿ.ಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net