ಅಪಘಾತದಲ್ಲಿ ಗಾಯಗೊಂಡಿದ್ದವ ಸಾವು

24ANKOLA1A
Published on

ಅಂಕೋಲಾ: ತಾಲೂಕಿನ ಹಿಲ್ಲೂರು ಹೊಸಕಂಬಿಯ ನಿವಾಸಿ ವಿಶ್ವನಾಥ ಹನುಮಂತ ಆಗೇರ (19) ಮೃತಪಟ್ಟವ. ಈತನು ಆ. 22ರಂದು ಕಾರವಾರ ರಸ್ತೆಯ ನೀಲಂಪುರ ಮಾರ್ಗವಾಗಿ ಅಂಕೋಲಾ ಪಟ್ಟಣಕ್ಕೆ ಬರುತ್ತಿದ್ದ ವೇಳೆ ಬೈಕ್ ಚಾಲನೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಮತ್ತು ಬೀದಿದೀಪದ ಕಂಬಕ್ಕೆ ಡಿಕ್ಕಿ ಹೊಡೆದಿದ್ದ. ಪರಿಣಾಮವಾಗಿ ಬೈಕ್ ಸವಾರ ವಿಶ್ವನಾಥ ಆಗೇರ ಮತ್ತು ಹಿಂಬಂದಿ ಸವಾರ ಗೋಕರ್ಣ ಸಮೀಪದ ಹನೇಹಳ್ಳಿ ನಿವಾಸಿ ವಿಕಾಶ ಹೊನ್ನಾ ಆಗೇರ ರಸ್ತೆ ಬದಿಯಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಇವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ಒಳಪಡಿಸಿ, ಹೆಚ್ಚಿನ ಉಪಚಾರಕ್ಕಾಗಿ ಕಾರವಾರ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಂದ ಗಾಯಾಳಿಬ್ಬರನ್ನು ಮಂಗಳೂರು ವೆನ್​ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸಿದರು. ಅದರಲ್ಲಿ ವಿಶ್ವನಾಥ ಆಗೇರ ಗುರುವಾರ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net