ಯಾದಗಿರಿ: ಕಾಂಗ್ರೆಸ್ ಸರ್ಕಾರ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಪುರುಷರ ಬಟ್ಟೆ ಧರಿಸಿ ಬಂದಿದ್ದ ತೃತೀಯ ಲಿಂಗಿಗೆ ಟಿಕೆಟ್ ನೀಡಲು ಬಸ್ ಕಂಡಕ್ಟರ್ ಪರದಾಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ: ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…
ಜಿಲ್ಲೆಯ ಶಹಾಪುರ ತಾಲೂಕಿನ ತಡಬಿಡಿ ಗ್ರಾಮದ ತೃತೀಯ ಲಿಂಗಿ ಲಕ್ಷ್ಮೀ ರಾಯಚೂರಿನಿಂದ ಯಾದಗಿರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಲಕ್ಷ್ಮೀ ಫ್ರೀ ಟಿಕೆಟ್ ಕೇಳಿದಾಗ ಕಂಡಕ್ಟರ್ ಆಧಾರ್ ಕಾರ್ಡ್ ನೋಡಿ ಕಕ್ಕಾಬಿಕ್ಕಿಯಾಗಿದ್ದಾರೆ.
ಆಧಾರ್ ಕಾರ್ಡ್‌ನಲ್ಲಿ ಲಕ್ಷ್ಮೀ ಎಂಬ ಹೆಸರಿದ್ರೂ ಲಿಂಗದ ಜಾಗದಲ್ಲಿ ಪುರುಷ ಎಂದು ಉಲ್ಲೇಖಿಸಲಾಗಿತ್ತು. ಅದರ ಜತೆಗೆ ಲಕ್ಷ್ಮೀ ಪುರುಷರ ಬಟ್ಟೆ ಹಾಕಿದ್ದರಿಂದ ಗೊಂದಲಕ್ಕೀಡಾದ ಕಂಡಕ್ಟರ್ ಏನು ಮಾಡುವುದು ಎಂದು ತೋಚದೆ ಕಕ್ಕಾಬಿಕ್ಕಿಯಾಗಿದ್ದಾರೆ. ಪುರುಷರ ಬಟ್ಟೆ ಧರಿಸಿ ಬಂದ ತೃತೀಯ ಲಿಂಗಿಗೆ ಟಿಕೆಟ್ ನೀಡಲು ಪರದಾಡಿದ್ದಾರೆ. ರಾಯಚೂರುನಿಂದ ಯಾದಗಿರಿಗೆ ಬರುತ್ತಿದ್ದ ಬಸ್ ನಲ್ಲಿ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಗಂಡನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ; ತಾನೂ ವಿಷ ಕುಡಿದು ಮಕ್ಕಳಿಗೂ ವಿಷ ಉಣಿಸಿದಳು
ಶಹಾಪುರ ತಾಲೂಕಿನ ತಡಬಿಡಿ ಗ್ರಾಮದ ತೃತೀಯ ಲಿಂಗಿ ಎಂದು ಆಧಾರ್ ಕಾರ್ಡ್ ನೋಡಿದ ಕಂಡಕ್ಟರ್, ಹೆಸರು ಲಕ್ಷ್ಮೀ, ಲಿಂಗ ಪುರುಷ ಇದೇನಿದು ಎಂದು ಪ್ರಶ್ನಿಸಿದ ಕಂಡಕ್ಟರ್‌ಗೆ ಸಿಕ್ಕ ಉತ್ತರ ತೃತೀಯ ಲಿಂಗಿ ಎನ್ನೋದು. ನಾನು ಮಹಿಳೆಯರ ಬಟ್ಟೆ ಹಾಕಿಕೊಳ್ಳಲ್ಲ. ಯಾವಾಗಲೂ ಪುರುಷರ ಬಟ್ಟೆನೇ ಧರಿಸುತ್ತೇನೆ ಎಂದು ಹೇಳಿದ್ದು, ಕೊನೆಗೂ ಮನವರಿಕೆ ಮಾಡಿಕೊಂಡ ಕಂಡಕ್ಟರ್ ಶಕ್ತಿ ಯೋಜನೆಯಡಿ ಫ್ರೀ ಟಿಕೆಟ್ ಕೊಟ್ಟು ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಪುರುಷರು ಹಾಕುವ ಬಟ್ಟೆ ಧರಿಸಿ ಪ್ರಯಾಣ ಮಾಡುತ್ತಿರುವದಕ್ಕೆ ಟಿಕೆಟ್ ನೀಡಲು ಕಂಡಕ್ಟರ್‌ಗೆ ಕನಫ್ಯೂಸ್ ಆಗಿದೆ.