

ವಿಜಯಪುರ: ಬುದ್ಧಿ ಹೇಳಿದ ಕಾರಣಕ್ಕೆ ತಂದೆ ಮೇಲೆ ಕೋಪಗೊಂಡ ಮಗ, ಮಲಗಿದ್ದ ವೇಳೆ ತಂದೆಯ ತಲೆಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿರುವ ಘಟನೆ ವಿಜಯಪುರದ ವೆಂಕಟೇಶ್ವರ ನಗರದಲ್ಲಿ ನಡೆದಿದೆ.
ರಮೇಶ್ ಕೂಡಿಗನೂರ (60) ಹತ್ಯೆಯಾಗಿರುವ ದುರ್ದೈವಿ. ಪುತ್ರ ಅಮೀತ್ ಕೂಡಿಗನೂರ ಹತ್ಯೆಗೈದಿರುವ ಆರೋಪಿ. ತಂದೆಯನ್ನ ಕೊಂದ ಯುವಕ ಬಿಇ(ಇಂಜಿನಿಯರಿಂಗ್) ಪದವಿಧರ ಆಗಿದ್ದಾನೆ.
ಮಾದಕ ವ್ಯಸನಿಯಾಗಿದ್ದ ಅಮೀತ್ಗೆ ದುಷ್ಚಟದಿಂದ ದೂರವಿರು ಎಂದು ರಮೇಶ್ ಬುದ್ದಿ ಹೇಳಿದ್ದರು. ಈ ವಿಚಾರವಾಗಿ ತಂದೆ-ಮಗನ ಮಧ್ಯೆ ಜಗಳವಾಗಿದೆ. ಕೋಪಗೊಂಡ ಮಗ ತಂದೆಯನ್ನೇ ಕೊಲೆ ಮಾಡಬೇಕು ಎಂದು ಸ್ಕೇಚ್ ಹಾಕಿದ್ದಾನೆ.
ಮನೆಯಲ್ಲಿ ರಮೇಶ್ ಮಲಗಿದ್ದ ವೇಳೆ ತಲೆಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು ಅಮೀತ್ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.