ದೌರ್ಜನ್ಯ ಖಂಡಿಸಿ ಮಾನವ ಸರಪಳಿ

manava sarapali
ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ವಿರೋಧಿಸಿ ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ ಬನ್ನಂಜೆ ಶ್ರೀ ನಾರಾಯಣಗುರು ವೃತ್ತದಿಂದ ಎಂಜಿಎಂ ಕಾಲೇಜು ತನಕ ವಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಯಿತು.
Published on

ಉಡುಪಿ: ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ವಿರೋಧಿಸಿ ಸವಾಜದ ಜಾಗೃತಿಗಾಗಿ ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ ಬನ್ನಂಜೆ ಶ್ರೀ ನಾರಾಯಣಗುರು ವೃತ್ತದಿಂದ ಎಂಜಿಎಂ ಕಾಲೇಜು ತನಕ ವಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು.

ರಸ್ತೆಯುದ್ದಕ್ಕೂ ಶಾಸಕರು, ಮುಖಂಡರ ಸಹಿತ ನೂರಾರು ಕಾರ್ಯಕರ್ತರು ಸರತಿ ಸಾಲಿನಲ್ಲಿ ನಿಂತು, ಸಂಖ್ಯೆ ಕಡಿಮೆಯಾದರೆ ಸಂಸ್ಕೃತಿ ನಾಶವಾದಂತೆ, ಬಾಂಗ್ಲಾ ಹಿಂದುಗಳಿಗಾಗಿ ಒಂದು ನಿಮಿಷ ನಿಲ್ಲಿ, ಬಾಂಗ್ಲಾ ಹಿಂದುಗಳಿಗಿಂದು ರಕ್ಷಣೆಯಿಲ್ಲ, ಹಿಂದುಗಳೇ ಎಚ್ಚರ. ಅಂದು ಪಾಕಿಸ್ತಾನದಲ್ಲಿ ಹಿಂದು ಹತ್ಯಾಕಾಂಡ, ಇಂದು ಬಾಂಗ್ಲಾ ದೇಶದಲ್ಲಿ. ನಾಳೆ ಯೋಚಿಸಿ, ಮುಂತಾದ ೋಷವಾಕ್ಯ ಹೊಂದಿರುವ ಪ್ಲೇ ಕಾರ್ಡ್ ಪ್ರದರ್ಶಿಸಿದರು.

ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ವಾಜಿ ಸಚಿವ ಪ್ರಮೋದ್ ಮಧ್ವರಾಜ್, ವಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಪ್ರಮುಖರಾದ ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ವೀಣಾ ಶೆಟ್ಟಿ, ಶ್ರೀಶಾ ನಾಯಕ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net