ಬದಲಿ ಆಟಗಾರನಾಗಿ ಆಸೀಸ್​ ಗೆಲುವಿನ ರೂವಾರಿಯಾದ ಲಬುಶೇನ್​

aus labu web
Published on

ಬ್ಲೋಮ್​ಫಾಂಟೇನ್​: ಬೌನ್ಸರ್​ ಎಸೆತದಲ್ಲಿ ತಲೆಗೆ ಚೆಂಡೇಟು ತಿಂದು ಕ್ಯಾಮರಾನ್​ ಗ್ರೀನ್​ ಮೈದಾನದಿಂದ ಹೊರನಡೆದ ನಡುವೆ ಆಸೀಸ್​ 113 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡಾಗ ಸೋಲಿನ ಭೀತಿ ಆವರಿಸಿತು. ಆಗ ಗ್ರೀನ್​ಗೆ "ಕನ್​ಕಷನ್​' ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಬ್ಯಾಟರ್​ ಮಾರ್ನಸ್​ ಲಬುಶೇನ್​ (80*ರನ್​, 93 ಎಸೆತ, 8 ಬೌಂಡರಿ) ಪ್ರದರ್ಶಿಸಿದ ಭರ್ಜರಿ ಬ್ಯಾಟಿಂಗ್​ ಮತ್ತು ಬಾಲಂಗೋಚಿ ಆಶ್ಟನ್​ ಅಗರ್​ (48*ರನ್​, 69 ಎಸೆತ, 3 ಬೌಂಡರಿ, 1 ಸಿಕ್ಸರ್​) ನೀಡಿದ ಸಮರ್ಥ ಬೆಂಬಲದ ಬಲದಿಂದ ಆಸ್ಟ್ರೆಲಿಯಾ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 3 ವಿಕೆಟ್​ಗಳಿಂದ ಗೆಲುವು ದಾಖಲಿಸಿತು. ಇದರೊಂದಿಗೆ ಮಿಚೆಲ್​ ಮಾರ್ಷ್​ ಪಡೆ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ದಕ್ಷಿಣ ಆಫ್ರಿಕಾ, 49 ಓವರ್​ಗಳಲ್ಲಿ 222 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಕುಸಿತ ಕಂಡ ಆಸೀಸ್​ ಸೋಲಿನ ಸುಳಿಗೆ ಸಿಲುಕಿದಾಗ ಲಬುಶೇನ್​-ಅಗರ್​ ಜೋಡಿ ಮುರಿಯದ 8ನೇ ವಿಕೆಟ್​ಗೆ 112 ರನ್​ ಸೇರಿಸಿದ ಸಾಹಸದಿಂದ 40.2 ಓವರ್​ಗಳಲ್ಲಿ 7 ವಿಕೆಟ್​ಗೆ 225 ರನ್​ ಗಳಿಸಿ ಜಯಭೇರಿ ಬಾರಿಸಿತು.

ದಕ್ಷಿಣ ಆಫ್ರಿಕಾ: 49 ಓವರ್​ಗಳಲ್ಲಿ 222 (ಡಿಕಾಕ್​ 11, ಬವುಮಾ 114, ಡುಸೆನ್​ 8, ಮಾರ್ಕ್ರಮ್​ 19, ಕ್ಲಾಸೆನ್​ 14, ಮಿಲ್ಲರ್​ 0, ಜಾನ್ಸೆನ್​ 32, ಹ್ಯಾಸಲ್​ವುಡ್​ 41ಕ್ಕೆ 3, ಸ್ಟೋಯಿನಿಸ್​ 20ಕ್ಕೆ 2).

ಆಸ್ಟ್ರೆಲಿಯಾ: 40.2 ಓವರ್​ಗಳಲ್ಲಿ 7 ವಿಕೆಟ್​ಗೆ 225 (ವಾರ್ನರ್​ 0, ಹೆಡ್​ 33, ಮಾರ್ಷ್​ 17, ಗ್ರೀನ್​ 0, ಇಂಗ್ಲಿಸ್​ 1, ಕ್ಯಾರಿ 3, ಸ್ಟೋಯಿನಿಸ್​ 17, ಲಬುಶೇನ್​ 80*, ಅಗರ್​ 48*, ರಬಾಡ 48ಕ್ಕೆ 2, ಕೋಟ್ಜಿ 44ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net