

ಕೋಟ: ಅಖಂಡವಾಗಿದ್ದ ಭರತಖಂಡವನ್ನು ಅಂದಿನ ಕೆಲವು ಅಹಿಂಸಾವಾದಿಗಳು ತ್ರಿಖಂಡ ಮಾಡಿದ್ದು, ಇದರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ಅಖಂಡ ಭಾರತ ಮತ್ತೊಮ್ಮೆ ಒಂದುಗೂಡುವ ಎಲ್ಲ ಲಕ್ಷಣಗಳು ಗೊಚರಿಸುತ್ತಿದೆ. ಇದಕ್ಕೆ ಶ್ರೀ ರಾಮಮಂದಿರವೇ ಸಾಕ್ಷಿ ಎಂದು ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.
ಕೋಟದಲ್ಲಿ ಭಾನುವಾರ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಜನಜಾಗೃತಿ ಪಂಜಿನ ಮೆರವಣಿಗೆ ಹಾಗೂ ಸಭೆ ಉದ್ದೇಶಿಸಿ ಮಾತನಾಡಿದರು.
ಉದ್ಯಮಿ ರಮೇಶ್ ಪ್ರಭು ಉದ್ಘಾಟಿಸಿದರು. ಸಾಲಿಗ್ರಾಮ ಆಂಜನೇಯ ದೇಗುಲದಿಂದ ಹೊರಟ ಪಂಜಿನ ಮೆರವಣಿಗೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಜ್ಯೋತಿ ಪ್ರಜ್ವಲಿಸಿ ಚಾಲನೆ ನೀಡಿದರು.
ಕೋಟ ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ಪವನ್ ಕುಂದರ್, ಸಂಘಟನೆಯ ಜಿಲ್ಲಾ ಪ್ರಮುಖ ಚಂದ್ರ ಶಿರಿಯಾರ, ಕೋಟ ಘಟಕದ ಗೌರವಾಧ್ಯಕ್ಷ ಆನಂದ್ ಟೈಲರ್ ಮತ್ತಿತರರು ಇದ್ದರು. ಕೀರ್ತೀಶ್ ಪೂಜಾರಿ ಸ್ವಾಗತಿಸಿದರು. ಮಂಜುನಾಥ್ ಆಚಾರ್ ನಿರೂಪಿಸಿದರು.