ಕಡ್ಡಾಯವಾಗಿ ಮತ ಚಲಾಯಿಸಿ

mgnrega jarruti
ತಾಳಕೇರಿಯ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಮ್ಮಿಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನರೇಗಾ ಕಾರ್ಮಿಕರು.
Published on

ಯಲಬುರ್ಗಾ: ನರೇಗಾ ಕೂಲಿಕಾರರು ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಪಿಡಿಒ ಹನುಮಂತಪ್ಪ ಕಂಬಾರ ಹೇಳಿದರು.

ಮತದಾನ ಜಾಗೃತಿ

ತಾಳಕೇರಿ ಗ್ರಾಮದಲ್ಲಿ ಗ್ರಾಪಂ, ಸ್ವೀಪ್ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೇ 10 ರಂದು ನಡೆಯುವ ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಬೇಕು. ಯಾರೂ ಹೊರಗುಳಿಯಬಾರದು. ಈ ಬಾರಿ ಉದ್ಯೋಗ ಖಾತ್ರಿ ಚೀಟಿ ತೋರಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಮತದಾನ ಹಾಗೂ ನರೇಗಾ ಕುರಿತು ಮಾಹಿತಿ ನೀಡಿದರು. ಕಾಮಗಾರಿ ಸ್ಥಳದಲ್ಲಿದ್ದ 751 ಜನ ಕೂಲಿಕಾರರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕರವಸೂಲಿಗಾರರಾದ ಪ್ರಕಾಶ, ಮಂಜುನಾಥ, ಡಿಇಒ ರೇಖಾ, ಬಿಎಫ್‌ಟಿ ಶ್ರೀಕಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net