

ಉಳ್ಳಾಲ: ಕಸ ನಿರ್ವಹಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ದ.ಕ., ಹರೇಕಳ ಗ್ರಾ.ಪಂ., ಪಾವೂರು ಗ್ರಾ.ಪಂ., ಬೋಳಿಯಾರು ಗ್ರಾ.ಪಂ. ಮತ್ತು ಹಸಿರುದಳದ ಆಶ್ರಯದಲ್ಲಿ ಕಸದ ವಿಷಯಗಳ ಬಗ್ಗೆ ಬೋಳಿಯಾರ್ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ಕಿರಿಯ ವಿಭಾಗದಲ್ಲಿ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಬೋಳಿಯಾರ್ ಶಾಲೆ ಮತ್ತು ಹಿರಿಯರ ವಿಭಾಗದಲ್ಲಿ ಪಾವೂರು ಸರ್ಕಾರಿ ಪ್ರೌಢಶಾಲೆ ಸಮಗ್ರ ಪ್ರಶಸ್ತಿ ಪಡೆಯಿತು.
ಕಸ ಬರಹ, ಪ್ರಬಂಧ ಸ್ಪರ್ಧೆ, ಕಸ ನುಡಿ, ಭಾಷಣ ಸ್ಪರ್ಧೆ, ಕಸ ಘೋಷ- ಘೋಷಣ ತಯಾರಿ, ಕಸಗಾನ- ಸಮೂಹಗೀತೆ, ಕಸರಸ- ಕ್ರಾಫ್ಟ್ ಮೇಕಿಂಗ್, ಕಸಭಿನಯ- ಕಿರುನಾಟಕ ಮತ್ತು ಕಸ ಹಂಟ್ ಎಂಬ ಸ್ಪರ್ಧೆಯಲ್ಲಿ 3 ಪಂಚಾಯಿತಿ ವ್ಯಾಪ್ತಿಯ ಶಾಲೆಗಳ 300ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಹರೇಕಳ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಮಜೀದ್ ಎಂ.ಪಿ.ಅಧ್ಯಕ್ಷತೆ ವಹಿಸಿದ್ದರು. ಸೆಲ್ಕೋ ಸಂಸ್ಥೆಯ ಮಂಗಳೂರು ವ್ಯವಸ್ಥಾಪಕ ರವೀನ ಬೋಳಿಯಾರ್, ತೀರ್ಪುಗಾರ ರಾಕೇಶ್ ಶೆಟ್ಟಿ, ಉಪನ್ಯಾಸಕ ದೀರಾಜ್, ಮುಖ್ಯಶಿಕ್ಷಕಿ ಗೀತಾ, ಹಸಿರುದಳದ ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು. ಪ್ರಿಯಾ ಸ್ವಾಗತಿಸಿದರು. ವರ್ಷಿಣಿ ವಂದಿಸಿದರು. ಶಾಂತಪ್ಪ ನಿರೂಪಿಸಿದರು.