

ಮೂಡುಬಿದಿರೆ: ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬುಧವಾರ ಶ್ರೀ ಗಣಪತಿ ಮತ್ತು ಶ್ರೀ ನರಸಿಂಹ ದೇವರಿಗೆ ಕಲಶಾಭಿಷೇಕ ಸಹಿತ ವಿವಿಧ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ ತತ್ವಹೋಮ, ತತ್ವಕಲಶಾಭಿಷೇಕ, ಚಂಡಿಕಾಯಾಗ, ಕಲಶ ಮಂಡಲ ರಚನೆ, ಸಂಜೆ ಬ್ರಹ್ಮಕಲಶಾಧಿವಾಸ, ಕುಂಭೆ ೀಶಕಲಶಾಧಿವಾಸ, ಕರ್ಕರಿಪೂಜೆ, ಅಧಿವಾಸ ಹೋಮ ನಡೆಯಿತು.
ರಾತ್ರಿ ಚೌಟರಾಣಿ ಅಬ್ಬಕ್ಕ ವೇದಿಕೆಯಲ್ಲಿ ವಿದುಷಿ ಮಂಜುಳ ಸುಬ್ರಹ್ಮಣ್ಯ ನಾಟ್ಯರಂಗ ಪುತ್ತೂರು ತಂಡದಿಂದ ಭರತನಾಟ್ಯ ವೈಭವ, ವಿದುಷಿ ಡಾ.ಸಹನಾ ಭಟ್ ತಂಡದಿಂದ ನಾಟ್ಯ ವೈಭವ, ಮೂಡುಬಿದಿರೆ ಯಕ್ಷನಿಧಿ ಶಿಕ್ಷಣ ಸಂಸ್ಥೆ ಮತ್ತು ಮಕ್ಕಳ ಮೇಳದಿಂದ ಸಹಸ್ರ ಲಿಂಗೋದ್ಭವ ದೊಂದಿ ಬೆಳಕಿನ ಯಕ್ಷಗಾನ, ತಿರುಮಲರಾಜ ಚೌಟ ವೇದಿಕೆಯಲ್ಲಿ ಸನಾತನ ನಾಟ್ಯಾಲಯ ಮಂಗಳೂರು, ಅರೆಹೊಳೆ ಪ್ರತಿಷ್ಠಾನ ಮಂಗಳೂರು, ನೃತ್ಯ ವಸಂತ ನಾಟ್ಯಾಲಯ ಕುಂದಾಪುರ, ನೃತ್ಯ ನಿಕೇತನ ಕೊಡವೂರು ತಂಡದಿಂದ ನೃತ್ಯೋಲ್ಲಾಸ ಕಾರ್ಯಕ್ರಮ, ಅಡಿಗಳ್ ಶ್ರೀ ನಿವಾಸ ಭಟ್ ವೇದಿಕೆಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.