

ಕೋಟ: ಇಲ್ಲಿನ ಮೂಡುಗಿಳಿಯಾರು ಸಂಯುಕ್ತ ಪ್ರೌಢಶಾಲೆಗೆ ಸುಸಜ್ಜಿತ ಕಾಂಪೌಂಡ್ ಗೇಟನ್ನು ಗಿಳಿಯಾರು ಯುವಕ ಮಂಡಲ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಗೇಟ್ ಲೋಕಾರ್ಪಣೆಗೊಳಿಸಿದರು. ಕೋಟ ಗ್ರಾಪಂ ಅಧ್ಯಕ್ಷ ಜ್ಯೋತಿ ಬಿ.ಶೆಟ್ಟಿ, ಸದಸ್ಯರಾದ ಯೋಗೇಂದ್ರ ಪೂಜಾರಿ, ಗಿಳಿಯಾರು ಯುವಕ ಮಂಡಲ ಅಧ್ಯಕ್ಷ ಶೇಖರ್ ಜಿ, ಸ್ಥಾಪಾಕಾಧ್ಯಕ್ಷ ಸುರೇಶ್ ಗಿಳಿಯಾರು, ವಕೀಲ ಟಿ.ಮಂಜುನಾಥ್, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಮಾಜಿ ತಾಪಂ ಸದಸ್ಯ ಭರತ್ ಕುಮಾರ್ ಶೆಟ್ಟಿ, ಪ್ರಾಥಮಿಕ ಶಾಲಾ ವಿಭಾಗ ಮುಖ್ಯ ಶಿಕ್ಷಕಿ ವಸಂತಿ, ಪ್ರೌಢಶಾಲಾ ವಿಭಾಗ ಮುಖ್ಯ ಶಿಕ್ಷಕಿ ಜೂಲಿಯಟ್ ಕ್ರಾಸ್ತಾ, ದೈಹಿಕ ಶಿಕ್ಷಕ ಶೇಖರ್, ಗಿಳಿಯಾರು ಯುವಕ ಮಂಡಲ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.