ಪಡುಬಿದ್ರಿ: ಕಾಪು ತಾಲೂಕು ಉಚ್ಚಿಲ ವಲಯದ ಸಾರ್ವಜನಿಕ ಹಿಂದು ರುದ್ರಭೂಮಿಗೆ ಸಿಲಿಕಾನ್ ಚೇಂಬರ್ ಒದಗಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರು ಮಾಡಿದ 1,52,000 ರೂ. ಮೊತ್ತದ ಮಂಜೂರಾತಿ ಪತ್ರವನ್ನು ಯೋಜನೆ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಮೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘಕ್ಕೆ ಹಸ್ತಾಂತರಿಸಿದರು.

ಸಂಘದ ಅಧ್ಯಕ್ಷ ಪ್ರಕಾಶ್ ವಿ.ಅಂಚನ್, ಉಪಾಧ್ಯಕ್ಷ ವಾಸು ಎಸ್.ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಅಮೀನ್, ರಮೇಶ್ ಪೂಜಾರಿ, ಮಹಾಲಿಂಗ ಅಂಚನ್, ದಿರೇಶ್ ಮೂಳೂರು, ಚಂದ್ರಪ್ಪ ಕುಕ್ಯಾನ್, ಸಂಜೀವ ಅಮೀನ್, ಸುದೀರ್ ಎಂ., ವಿಜಯ ಆರ್.ಕೋಟ್ಯಾನ್, ಒಕ್ಕೂಟ ಅಧ್ಯಕ್ಷೆ ಸುಲೋಚನಾ ಬಂಗೇರ, ಮೇಲ್ವಿಚಾರಕಿ ವಿಜಯ, ಸೇವಾ ಪ್ರತಿನಿಧಿ ಸುಮನಾ ಟಿ. ಇದ್ದರು.