ಲಕ್ಷ್ಮಿ ದೇವಿಯ ನೆಕ್ಲೇಸ್ ತೊಟ್ಟಿದ್ದ ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

tapsi
Published on

ಮುಂಬೈ: ಲಕ್ಷ್ಮಿ ದೇವಿಯ ನೆಕ್ಲೇಸ್ ತೊಟ್ಟು ರ್‍ಯಾಂಪ್‌ ವಾಕ್ ಮಾಡಿದ ನಟಿ ತಾಪ್ಸಿ ಪನ್ನು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆಂದು ಮಧ್ಯಪ್ರದೇಶದ ಇಂದೋರ್​ನಲ್ಲಿ ದೂರು ದಾಖಲಾಗಿದೆ.

ಎದೆ ಸೀಳು ಕಾಣಿಸುವ ರೀತಿಯಲ್ಲಿ ಬಟ್ಟೆ ಧರಿಸಿರುವ ತಾಪ್ಸಿ ಆ ಬಟ್ಟೆಯ ಮೇಲೆ ಲಕ್ಷ್ಮಿ ಚಿತ್ರ ಇರುವ ನಕ್ಲೇಸ್ ಧರಿಸಿದ್ದಾರೆ. ಇದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಿ.ಜೆಪಿ ಶಾಸಕಿ ಮಾಲಿನಿ ಗೌರ್ ಪುತ್ರ ಏಕಲವ್ಯ ಸಿಂಗ್ ಗೌರ್ ಅವರು ಇಂದೋರ್​​ನಲ್ಲಿ ದೂರು ದಾಖಲಿಸಿದ್ದಾರೆ.

ನಟಿ ತಾಪ್ಸಿ ಪನ್ನು ಮಾರ್ಚ್ 12ರಂದು ಮುಂಬೈನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ಭಾಗಿಯಾಗಿದ್ದರು. ಕೆಂಪು ಬಣ್ಣದ ಗೌನ್ ಧರಿಸಿದ್ದ ಅವರು ಆ ಕಾಸ್ಟ್ಯೂಮ್ ನೊಂದಿಗೆ ಲಕ್ಷ್ಮಿ ಚಿತ್ರ ಇರುವ ನಕ್ಲೇಸ್ ಹಾಕಿಕೊಂಡು ರ್‍ಯಾಂಪ್‌ ವಾಕ್ ಮಾಡಿದ್ದರು. ಈ ಫೋಟೋ ಸಾಕಷ್ಟು ವೈರಲ್​ ಆಗಿದ್ದವು.

ದೇಹಪೂರ್ತಿ ಕಾಣಿಸುವ ಡ್ರೆಸ್​ನ ಜೊತೆ ಹಿಂದೂ ಧರ್ಮಿಯರು ಅತ್ಯಂತ ಭಕ್ತಿಯಿಂದ ಪೂಜಿಸುವ ಲಕ್ಷ್ಮಿ ದೇವಿ ಫೋಟೋ ಇರುವ ನೆಕ್ಲೇಸ್​ ಧರಿಸಿರುವುದು ಖಂಡನಾರ್ಹ. ಹಿಂದೂಗಳ ಭಾವನೆಗೆ ಧಕ್ಕೆ ತರುವಂತಿದೆ ಎಂದು ಟ್ರೋಲ್​​ ಮಾಡಲಾಗಿತ್ತು. ಅಶ್ಲೀಲ ಬಟ್ಟೆ ಜೊತೆ ಲಕ್ಷ್ಮಿ ಧರಿಸುವುದು ಶೋಭೆ ಅಲ್ಲ ಎಂದು ಹಲವರು ಕಾಮೆಂಟ್ ಕೂಡ ಮಾಡಿದ್ದರು. ಆದರೆ ಇದೆ ಬೆನ್ನಲ್ಲೆ ನಟಿ ವಿರುದ್ಧವಾಗಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net