ಸಂಸ್ಕಾರಯುತ ಶಿಕ್ಷಣ ಭವಿಷ್ಯದ ದಿಕ್ಸೂಚಿ

banta-1
Published on

ಶಿರ್ವ: ಮಗುವಿನ ಕಲಿಕೆ ಮನೆಯಿಂದಲೇ ಆರಂಭವಾಗುತ್ತದೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಮನೆಯ ವಾತಾವರಣ, ಸಂಸ್ಕಾರ, ಪರಿಸರ ಮಗುವಿನ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಬಾಲ್ಯದ ಸಂಸ್ಕಾರಯುತ ಶಿಕ್ಷಣ ಭವಿಷ್ಯದ ದಿಕ್ಸೂಚಿ ಎಂದು ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಶಿರ್ವ ಹೇಳಿದರು.

ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿರುವ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ಹಿ.ಪ್ರಾ. ಶಾಲಾ ಶಿಕ್ಷಕ, ಪಾಲಕರ ಸಭೆಯಲ್ಲಿ ಮಾತನಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಣ ವ್ಯಕ್ತಿಯ ಭವಿಷ್ಯದ ಭದ್ರ ಬುನಾದಿ. ಪಾಲಕ-ಶಿಕ್ಷಕರ ನಡುವಿನ ಧನಾತ್ಮಕ ಸಂಬಂಧ ಬಲಗೊಂಡಾಗ ಕಲಿಕಾ ಮಟ್ಟ ವೃದ್ಧಿಸಿ, ಸತ್ಪ್ರಜೆ ನಿರ್ಮಾಣ ಸಾಧ್ಯ ಎಂದರು.

ಸಂಚಾಲಕ ರಾಮದಾಸ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ, ದೇವಳ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಪಾಟ್ಕರ್, ದೇವಳ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸಂಗೀತಾ ಆರ್.ಪಾಟ್ಕರ್ ಸ್ವಾಗತಿಸಿದರು. ಶಿಕ್ಷಕಿ ರೇಷ್ಮಾ ಪರಿಚಯಿಸಿದರು. ಸುಮತಿ ಸಹಕರಿಸಿದರು. ಶಾಲಿನಿ ಜಿ. ನಿರೂಪಿಸಿದರು. ಶಿಕ್ಷಕಿ ವಿನುತಾ ಆರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net