ಕಾಡೂರು ಶ್ರೀ ಅಮ್ಮನವರ ದೇವಸ್ಥಾನ ಧಾರ್ಮಿಕ ಸಭೆ

kon-1
Published on

ಕೊಕ್ಕರ್ಣೆ: ಕಾಡೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ಧಾರ್ಮಿಕ ಸಭೆ ಜರುಗಿತು.

ಸೂರಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಪಿ.ಸುದರ್ಶನ ಶೆಟ್ಟಿ ಮತ್ತು ಪದ್ಮಿನಿ ದಂಪತಿ ಉದ್ಘಾಟಿಸಿದರು. ಕಾಡೂರು ದೇವಸ್ಥಾನ ಮೊಕ್ತೇಸರ ಸತೀಶ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಶ್ರೀಕ್ಷೇತ್ರ ಮಂದಾರ್ತಿ ಎಚ್.ಧನಂಜಯ ಶೆಟ್ಟಿ, ಶ್ರೀ ಕ್ಷೇತ್ರ ನೀಲಾವರ ರಘುರಾಮ ಮಧ್ಯಸ್ಥ, ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವಿಠಲ್ ಶೆಟ್ಟಿ ಶೇಡಿಕೊಡ್ಲು, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸುರೇಶ್ ಶೆಟ್ಟಿ ತಡಾಲು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಮೇಶ್ ಪಿ.ಕೆ., ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ಪ್ರಮುಖರಾದ ಕಿರಣ್ ಶೆಟ್ಟಿ ಕರ್ಜೆ, ವಿಶ್ವನಾಥ್ ಶೆಟ್ಟಿ ಮುಂಡಾಡಿ, ಆನಂದ ಮರಕಾಲ ಮೊಗವೀರಪೇಟೆ, ಶಿವರಾಮ ಶೆಟ್ಟಿ ಪಡುಕಾಡೂರು, ಗೋಪಿನಾಥ ಕಾಮತ್ ವಂಡಾರು, ನಿತ್ಯಾನಂದ ಶೆಟ್ಟಿ ನಡೂರು, ಜಯಂತ ಶೆಟ್ಟಿ ಮುಂಡಾಡಿ, ಗಣೇಶ್ ಕಿಣಿ ಬೆಳ್ವೆ, ವಾದಿರಾಜ ಕೆ., ಶ್ರೀನಿವಾಸ ಶೆಟ್ಟಿಗಾರ್ ರಂಗನಕೆರೆ, ಗೋಪಾಲ ಶೆಟ್ಟಿ ಚಾರ, ಬಾಲಕೃಷ್ಣ ಹೆಗ್ಡೆ ಕೊಕ್ಕರ್ಣೆ, ಸದಾಶಿವ ಶೆಟ್ಟಿ ಪಡುಕಾಡೂರು, ಸಖಾರಾಮ ಸೋಮಯಾಜಿ ಮುಂಡಾಡಿ, ಗಂಗಾಧರ ಶೆಟ್ಟಿ ಕಾಡೂರು, ಹರೀಶ್ ಶ್ಯಾನುಭೋಗ್ ಕೊಕ್ಕರ್ಣೆ, ಕಾಶೀನಾಥ ಶೆಣೈ ಕಜ್ಕೆ, ಮಹೇಶ್ ಕಾಡೂರು, ಶಂಕರ ಮರಕಾಲ ಕಾಡೂರು, ಕೃಷ್ಣಯ್ಯ ಶೆಟ್ಟಿ ಕಾಡೂರು ಹೆಗ್ಡೇರಮನೆ, ವಸಂತ ಶೆಟ್ಟಿ ತಡಾಲು, ಅಶೋಕ್ ಎಲ್.ಕುಂದರ್ ಮಂದಾರ್ತಿ, ಪ್ರಮೋದ್ ಶೆಟ್ಟಿ ಮಂದಾರ್ತಿ ಮತ್ತಿತರರು ಉಪಸ್ಥಿತರಿದ್ದರು. ಅರುಣ್ ಕುಮಾರ್ ಶೆಟ್ಟಿ ಹೊರ್ಲಾಳಿ ಸ್ವಾಗತಿಸಿದರು. ವಾಸುದೇವ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net