ಅಡಕೆ ಕುರಿತ ಅದೊಂದು ವಿಷಯ ಇದುವರೆಗೂ ಯಾರೂ ತಿಳಿದಿಲ್ಲ, ಅದನ್ನು ಹೇಳುವುದೂ ಅಸಾಧ್ಯ: ವಿಜಯವಾಣಿ ಕ್ಲಬ್​ನಲ್ಲಿ ಅಡಕೆ ಕುರಿತ ಸಂವಾದ

Untitled-1
Published on

ಬೆಂಗಳೂರು: ಅಡಕೆ ಧಾರಣೆ ಏರಿಕೆ ಹಿನ್ನೆಲೆಯಲ್ಲಿ ಅದರ ಸಾಧಕ-ಬಾಧಕಗಳ ಕುರಿತು ವಿಜಯವಾಣಿ ಕ್ಲಬ್​ನಲ್ಲಿ ಇದೀಗ ಅಡಕೆ ಕ್ಷೇತ್ರಕ್ಕೆ ಸಂಬಂಧಿತ ಪರಿಣತರ ಸಮಾಲೋಚನೆ ನಡೆಯುತ್ತಿದೆ. ಅಡಕೆ ಧಾರಣೆ ಸಂಬಂಧ ವಿವಿಧ ಆಯಾಮಗಳ ಕುರಿತು ಇವರು ಬೆಳಕು ಚೆಲ್ಲಲಿದ್ದಾರೆ. ಮಾತ್ರವಲ್ಲ ಅಡಕೆ ಬೆಳೆಗಾರರೂ ತಮ್ಮ ಕುಂದುಕೊರತೆ, ಅನುಭವ ಅನಿಸಿಕೆಗಳನ್ನು ಕೂಡ ಇಲ್ಲಿ ಹೇಳಿಕೊಳ್ಳಬಹುದಾಗಿದೆ.

ಅಡಕೆ ಧಾರಣೆ ಬಗ್ಗೆ ಮೊದಲಿನವರಾಗಿ ಮಾತನಾಡಿದ ರಾಜ್ಯ ಅಡಕೆ ಮಾರಾಟ ಸಹಕಾರ ಮಂಡಳದ ಮಾಜಿ ಅಧ್ಯಕ್ಷ ಎಚ್.ಎಸ್. ಮಂಜಪ್ಪ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲೇ ಅತ್ಯಂತ ಅಧಿಕ ಎನ್ನುವಷ್ಟು ಏರಿಕೆಯನ್ನು ಅಡಕೆ ಧಾರಣೆ ಕಂಡಿದೆ. ಕರೊನಾ ಸಂಕಷ್ಟದಲ್ಲೂ ಈ ಅಧಿಕ ಬೆಲೆ ಬಂದಿರುವುದು ಖುಷಿಯ ಸಂಗತಿ. ಬೆಲೆ ಇದ್ದಾಗ ಸಂತೋಷ ಪಡೋಣ. ಹಾಗಂತ ಬೆಲೆ ಜಾಸ್ತಿ ಬಂದಾಗ ಅದರ ಮಟ್ಟಕ್ಕೆ ಜೀವನಶೈಲಿಯನ್ನು ಏರಿಸಿಕೊಳ್ಳುವ ಬೆಳೆಗಾರರು ಬೆಲೆ ಕುಸಿದಾಗ ಅವರೂ ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಆ ರೀತಿ ಮಾಡಿಕೊಳ್ಳಬಾರದು ಎಂಬ ಕಿವಿಮಾತನ್ನೂ ಹೇಳಿದರು.

ಅಲ್ಲದೆ ತಮ್ಮ ನಾಲ್ಕು ದಶಕಗಳ ಅನುಭವ ಆಧರಿಸಿ ಮಾತನಾಡಿದ ಅವರು, ಅಡಕೆ ಬೆಲೆ ಯಾವಾಗ ಏರುತ್ತದೆ, ಯಾಕೆ ಏರುತ್ತದೆ/ಇಳಿಯುತ್ತದೆ ಅಂತ ಇದುವರೆಗೂ ಯಾರೂ ಕಂಡುಹಿಡಿದಿಲ್ಲ. ಅದನ್ನು ಹೇಳಲು ಕೂಡ ಸಾಧ್ಯವಿಲ್ಲ ಎಂಬ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದರ ಅವರು ಬೆಳೆಗಾರರ ಕೈಯಲ್ಲಿ ಬೆಲೆ ಏರಿಕೆ/ಇಳಿಕೆ ಇಲ್ಲ ಎಂದರು. ಆದರೆ ಅಡಕೆ ಅವಲಂಬಿತ ಉದ್ಯಮದವರೇ ಅದರ ಬೆಲೆಯನ್ನು ಏರಿಸುತ್ತಾರೆ/ಇಳಿಸುತ್ತಾರೆ ಎಂದ ಅವರು, ಅಡಕೆ ಬೆಲೆಗೊಂದು ಸ್ಥಿರತೆ ಇರಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಅಡಕೆ ಧಾರಣೆ ಸಂಬಂಧ ಇನ್ನೂ ಹಲವು ಪರಿಣತರು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಾವು ಈ ಸಂವಾದವನ್ನು ಸೇರಿಕೊಳ್ಳಲು ಈ ಕೆಳಗಿನ ಲಿಂಕ್​ ಕ್ಲಿಕ್ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net