2,950 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಷೇರನ್ನು ಓಪನ್ ಮಾರ್ಕೆಟ್​ನಲ್ಲಿ ಖರೀದಿಸಿತು ವೇದಾಂತ

vedanta-1
Published on

ನವದೆಹಲಿ: ಭಾರತದಲ್ಲಿರುವ ತನ್ನ ಕಂಪನಿಯನ್ನು ಷೇರುಪೇಟೆಯಿಂದ ಡಿಲಿಸ್ಟ್ ಮಾಡಲು ಪ್ರಯತ್ನಿಸಿ ವಿಫಲವಾಗಿದ್ದ ಲಂಡನ್ ಮೂಲದ ವೇದಾಂತ ರಿಸೋರ್ಸಸ್ ಲಿಮಿಟೆಡ್​ ಓಪನ್ ಮಾರ್ಕೆಟ್​ನಲ್ಲಿ 18.5 ಕೋಟಿ ಷೇರುಗಳನ್ನು ಖರೀದಿಸಿದೆ. ಪ್ರತಿ ಷೇರಿಗೆ 159.94 ರೂಪಾಯಿ ಬೆಲೆ ನೀಡಿದ್ದು, ಷೇರುಗಳ ಖರೀದಿಗೆ ಒಟ್ಟು 2,959 ಕೋಟಿ ರೂಪಾಯಿ ವ್ಯಯಿಸಿರುವುದಾಗಿ ಕಂಪನಿ ತಿಳಿಸಿದೆ.

ಬ್ಲಾಕ್ ಡೀಲ್ ಮೂಲಕ ಕಂಪನಿ ಈ ವಹಿವಾಟು ನಡೆಸಿದೆ. ಇದರೊಂದಿಗೆ ವೇದಾಂತದ ಪಾಲು ಶೇಕಡ 50.13 ಇದ್ದದ್ದು ಶೇಕಡ 55.11ಕ್ಕೆ ಏರಿಕೆಯಾಗಿದೆ. ಜೆ.ಪಿ.ಮಾರ್ಗೆನ್ ಇಂಡಿಯಾ ಈ ವಹಿವಾಟನ್ನು ನಡೆಸಿಕೊಟ್ಟಿತ್ತು. ಕೆಲವು ದಿನಗಳ ಹಿಂದೆ ಷೇರುದಾರರಿಂದ ಬೈ ಬ್ಯಾಕ್ ಮೂಲಕ ಷೇರು ಖರೀದಿಗೆ ಮುಂದಾಗಿದ್ದ ಕಂಪನಿ ಮಾಲೀಕತ್ವಕ್ಕೆ ಸರಿಯಾದ ಬಹುಮತದ ಪಾಲುದಾರಿಕೆ ಇಲ್ಲದ ಕಾರಣ ಆ ಪ್ರಸ್ತಾವನೆಗೆ ಸೋಲಾಗಿತ್ತು.

ಗ್ರೂಪಿನ ಬಂಡವಾಳ ಮತ್ತು ಕಾರ್ಯಾಚರಣೆ ವ್ಯವಸ್ಥೆಯನ್ನು ಸರಳೀಕರಿಸುವ ಉದ್ದೇಶದ ವ್ಯೂಹಾತ್ಮಕ ಆದ್ಯತೆ ಮೇರೆಗೆ ಇದನ್ನು ನೆರವೇರಿಸಲಾಗಿದೆ. ಹಲವು ಕಂಪನಿಗಳ ವಿಲೀನಗಳೊಂದಿಗೆ ಸರಳೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇನ್ನು ಎಲ್ಲವೂ ಸಲೀಸಾಗಿ ನಡೆಯಲಿದೆ ಎಂದು ಕಂಪನಿ ಹೇಳಿಕೊಂಡಿದೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net