

ನವದೆಹಲಿ: ಕರೊನಾ ಲಾಕ್ಡೌನ್ ತೆರವಿನ ನಂತರ ಭಾರತದಲ್ಲಿ ಸ್ಮಾರ್ಟ್ಫೋನ್ಗೆ ಭಾರಿ ಬೇಡಿಕೆ ಬಂದಿದೆ. ಸೆಪ್ಟೆಂಬರ್ಗೆ ಅಂತ್ಯವಾದ 3ನೇ ತ್ರೖೆಮಾಸಿಕದಲ್ಲಿ ಸಾರ್ವಕಾಲಿಕ 5 ಕೋಟಿ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಬಂದಿವೆ. ಅದರಲ್ಲಿ ಚೀನಾದ ಕಂಪನಿಗಳ ಪಾಲು ಶೇಕಡ 76 ಇದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಲಿಸ್ ಹೇಳಿದೆ.
ಯಾವ ಕಂಪನಿ, ಎಷ್ಟು ಶಿಪ್ವೆುಂಟ್? * ಶೇ. 26.1 ಶಿಪ್ವೆುಂಟ್ನೊಂದಿಗೆ ಕ್ಸಿಯೋಮಿ ಮುಂಚೂಣಿಯಲ್ಲಿದೆ. ಅದು ತರಿಸಿಕೊಂಡ ಫೋನ್ ಸಂಖ್ಯೆ 1. 31 ಕೋಟಿ * ಸ್ಯಾಮ್ಂಗ್ 2ನೇ ಸ್ಥಾನ. ಶೇಕಡ 20.4. (1.2 ಕೋಟಿ). * ವಿವೊ 3ನೇ ಸ್ಥಾನ: ಶೇ. 17.8 (88 ಲಕ್ಷ). * ರಿಯಲ್ವಿು 4ನೇ ಸ್ಥಾನ. ಶೇ. 17.4 (87 ಲಕ್ಷ). * ಒಪ್ಪೊ 5ನೇ ಸ್ಥಾನ. ಶೇ. 12.1 (61ಲಕ್ಷ).
ಎಲ್ಲ 5 ಟಾಪ್ ಸ್ಮಾರ್ಟ್ಫೋನ್ ಮಾರಾಟಗಾರರಾದ ಷಿಯೋಮಿ, ಸ್ಯಾಮ್ಂಗ್, ವಿವೊ, ರಿಯಲ್ವಿು ಮತ್ತು ಒಪ್ಪೊ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಭಾರಿ ಏರಿಕೆ ಕಂಡಿವೆ. ಕಳೆದ ವರ್ಷ 4.62 ಕೋಟಿ ಫೋನ್ಗಳನ್ನು ಇವು ಭಾರತದ ಮಾರುಕಟ್ಟೆಗೆ ತಂದಿದ್ದವು. ಈಗ ಅದರಲ್ಲಿ ಶೇ. 8 ಏರಿಕೆಯಾಗಿ, 5 ಕೋಟಿಗೆ ತಲುಪಿದೆ ಎಂದು ಕ್ಯಾನಲಿಸ್ ತಿಳಿಸಿದೆ.
ಇದು ಭಾರತದಲ್ಲಿ ಒಂದೇ ತ್ರೖೆಮಾಸಿಕದಲ್ಲಿ ಸ್ಮಾರ್ಟ್ಫೋನ್ ಶಿಪ್ವೆುಂಟ್ನ (ಭಾರತದ ಮಾರುಕಟ್ಟೆಗೆ ಬಂದ ಫೋನ್ ಸಂಖ್ಯೆ) ದಾಖಲೆಯಾಗಿದೆ. ಭಾರತ-ಚೀನಾ ಗಡಿ ವಿವಾದ ಬಿಸಿ ನಡುವೆಯೂ ಗ್ರಾಹಕರ ಮನೋಭಾವದ ಮೇಲೆ ಹೆಚ್ಚಿನ ಪರಿಣಾಮ ಆಗಿಲ್ಲ. ಚೀನಾ ಕಂಪನಿಯ ಮೊಬೈಲ್ಗಳು ದಾಖಲೆಯ ಮಾರಾಟ ಕಾಣುತ್ತಿವೆ ಎಂದು ಕ್ಯಾನಲಿಸ್ನ ವರುಣ್ ಕಣ್ಣನ್ ಹೇಳಿದ್ದಾರೆ.