ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ 400ಕ್ಕೂ ಹೆಚ್ಚು ಅಂಶ ಏರಿಕೆ

STOCK Market 25 FEB 20
Published on

ಮುಂಬೈ: ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ)ನ ಉತ್ತೇಜನ ಕ್ರಮದ ಬೆನ್ನಿಗೆ ಭಾರತೀಯ ಷೇರುಪೇಟೆ ಮಂಗಳವಾರ ಚೇತರಿಕೆ ಕಂಡಿದ್ದು, ಆರಂಭಿಕ ವಹಿವಾಟಿನಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 400ಕ್ಕೂ ಹೆಚ್ಚು ಅಂಶ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 60ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಿಸಿವೆ.

ಸೆನ್ಸೆಕ್ಸ್​ ಆರಂಭಿಕ ವಹಿವಾಟಿನಲ್ಲಿ 32,164.65 ಅಂಶದ ತನಕ ಏರಿಕೆ ಕಂಡು ಬಳಿಕ, 31,894.99ರಲ್ಲಿ ವಹಿವಾಟು ಮುಂದುವರಿಸಿದೆ. ಇದೇ ರೀತಿ ನಿಫ್ಟಿ 60.05 ಅಂಶ ಏರಿದ್ದು, 9,342.35ರಲ್ಲಿ ವಹಿವಾಟು ಮುಂದುವರಿಸಿದೆ. ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂಡಸ್​ಇಂಡ್​ ಬ್ಯಾಂಕ್​ ಟಾಪ್ ಗೇನರ್ ಆಗಿದ್ದು, ಶೇಕಡ 8ಕ್ಕೂ ಹೆಚ್ಚು ಲಾಭ ಗಳಿಸಿದೆ. ಇದೇ ರೀತಿ, ಏಕ್ಸಿಸ್ ಬ್ಯಾಂಕ್​, ಎಚ್​ಡಿಎಫ್​​ಸಿ, ಟೆಕ್​ ಮಹೀಂದ್ರಾ, ಐಸಿಐಸಿಐ ಬ್ಯಾಂಕ್​, ಕೊಟಾಕ್ ಬ್ಯಾಂಕ್, ಎಸ್​ಬಿಐ ಷೇರುಗಳು ಕೂಡ ಲಾಭ ದಾಖಲಿಸಿವೆ. ಇನ್ನೊಂದೆಡೆ, ಸನ್​ಫಾರ್ಮಾ, ಎಚ್​ಸಿಎಲ್​ ಟೆಕ್​, ರಿಲಯನ್ಸ್​ ಇಂಡಸ್ಟ್ರೀಸ್​, ಭಾರ್ತಿ ಏರ್ಟೆಲ್​ ಷೇರುಗಳು ನಷ್ಟ ಅನುಭವಿಸಿವೆ.

ಈ ಹಿಂದಿನ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್​ 415.86 ಅಂಶ ಏರಿಕೆ ದಾಖಲಿಸಿ 31,743.08ರಲ್ಲೂ, ನಿಫ್ಟಿ 127.90 ಅಂಶ ಏರಿಕೆ ದಾಖಲಿಸಿ 9,282.30 ಅಂಶದಲ್ಲೂ ದಿನದ ವಹಿವಾಟು ಮುಗಿಸಿವೆ. ಷೇರುಪೇಟೆಯ ತಾತ್ಕಾಲಿಕ ಡೇಟಾ ಪ್ರಕಾರ ಸೋಮವಾರ ಫಾರಿನ್ ಪೋರ್ಟ್​ಫೋಲಿಯೋ ಇನ್​ವೆಸ್ಟರ್ಸ್​ 916.42 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಮ್ಯೂಚುವಲ್ ಫಂಡ್​ ಇಂಡಸ್ಟ್ರಿಯ ಪುನಶ್ಚೇತನಕ್ಕಾಗಿ ಆರ್​ಬಿಐ 50,000 ಕೋಟಿ ರೂಪಾಯಿಗಳ ಲಿಕ್ವಿಡಿಟಿ ಬೂಸ್ಟರ್ ಘೋಷಿಸಿತ್ತು. ಇವೆಲ್ಲವೂ ಷೇರುಪೇಟೆಯಲ್ಲಿ ಚೇತರಿಕೆಗೆ ಕಾರಣವಾಗಿ ಮೂಡಿ ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net