More

    COVID19 ಹಾನಿಗೆ ಪರಿಹಾರ ಚೀನಾವೇ ನೀಡಬೇಕು: ಜರ್ಮನಿಗಿಂತಲೂ ಹೆಚ್ಚು ಪರಿಹಾರ ನಮಗೆ ಸಿಗಬೇಕು ಎಂದ ಅಮೆರಿಕ

    ವಾಷಿಂಗ್ಟನ್​: ಜಗತ್ತನ್ನು ತಲ್ಲಣಗೊಳಿಸಿರುವ COVID19 ಕರೊನಾ ವೈರಸ್​ ಸೋಂಕಿನಿಂದಾಗಿ ಉಂಟಾಗಿರುವ ನಷ್ಟವನ್ನು ಚೀನಾವೇ ಭರ್ತಿಮಾಡಬೇಕು ಎಂಬ ಆಗ್ರಹ ಬೇರೆ ಬೇರೆ ದೇಶಗಳಿಂದ ಕೇಳತೊಡಗಿದೆ. ಜರ್ಮನಿ 13000 ಕೋಟಿ ಯೂರೋ ನಷ್ಟ ಭರ್ತಿ ಮಾಡಿಕೊಡುವಂತೆ ಚೀನಾವನ್ನು ಆಗ್ರಹಿಸಿದೆ. ಅಮೆರಿಕವೂ ಈಗ ಜರ್ಮನಿಯ ಮಾತಿಗೆ ಪೂರಕವಾಗಿ ಚೀನಾವೇ ಈ ನಷ್ಟ ಭರ್ತಿಯನ್ನು ಮಾಡಬೇಕು ಎನ್ನತೊಡಗಿದೆ.

    ವೈಟ್​ಹೌಸ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಷಯ ಪ್ರಸ್ಥಾಪಿಸಿದ್ದು, ಜರ್ಮನಿಯೂ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ನಾವೂ ಕೂಡ ಅದನ್ನೆ ಮಾಡುತ್ತಿದ್ದೇವೆ. ನಾವು ಪರಸ್ಪರ ಮಾತನಾಡಿಕೊಂಡಿದ್ದು, ಜರ್ಮನಿಗಿಂತ ಹೆಚ್ಚಿನ ನಷ್ಟವನ್ನು ನಾವು ಅನುಭವಿಸಿದ್ದೇವೆ. ಅದನ್ನು ಭರ್ತಿ ಮಾಡುವ ವಿಚಾರವಾಗಿ ನಾವು ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

    ಮಾರಣಾಂತಿಕವಾದ ವೈರಸ್​ ಜಾಗತಿಕವಾಗಿ 30 ಲಕ್ಷಕ್ಕೂ ಹೆಚ್ಚು ಜನರನ್ನು ಬಾಧಿಸಿದೆ. 2 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅಮೆರಿಕದಲ್ಲೇ ಗರಿಷ್ಠ 10 ಲಕ್ಷಕ್ಕೂ ಹೆಚ್ಚು ಜನ ಸೋಂಕುಪೀಡಿತರಾಗಿದ್ದು, 50,000ಕ್ಕೂ ಹೆಚ್ಚು ಜನ ಪ್ರಾಣಕಳೆದುಕೊಂಡಿದ್ದಾರೆ. ಅಮೆರಿಕದ ನಂತರ ಯುರೋಪ್ ಅತಿ ಹೆಚ್ಚು ಹಾನಿಗೊಳಗಾಗಿದೆ. ಇನ್ನು ಭಾರತದಲ್ಲಿ ಆರಂಭಿಕ ಹಂತದಲ್ಲೇ ಕಠಿಣ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಕಾರಣ ಕನಿಷ್ಠ ಮಟ್ಟದಲ್ಲಿ ಅಂದರೆ 886 ಪ್ರಾಣ ಹಾನಿ, ಸೋಂಕುಪೀಡಿತರ ಸಂಖ್ಯೆ 28,000ದ ಆಸುಪಾಸಿನಲ್ಲಿದೆ.

    ಕರೊನಾ ವೈರಸ್ ವಿಚಾರದಲ್ಲಿ ಚೀನಾ ಒಂದಿಷ್ಟು ಪಾರದರ್ಶಕತೆ ತೋರಿದ್ದರೆ ಮತ್ತು ಮಾಹಿತಿಯನ್ನು ಆರಂಭಿಕ ಹಂತದಲ್ಲೇ ಹಂಚಿಕೊಂಡಿದ್ದರೆ ಇಷ್ಟೆಲ್ಲ ಸಾವು-ನೋವು, ನಾಶ-ನಷ್ಟ ಸಂಭವಿಸುತ್ತಿರಲಿಲ್ಲ. ಇದು ಅಮೆರಿಕ, ಬ್ರಿಟನ್​, ಜರ್ಮನಿಯ ನಾಯಕರ ಅಭಿಪ್ರಾಯವಾಗಿದೆ. ಹೀಗಾಗಿ ಈ ಎಲ್ಲ ರಾಷ್ಟ್ರಗಳು ಚೀನಾ ಈ ನಷ್ಟ ಭರ್ತಿ ಮಾಡಬೇಕು ಎಂದು ಆಗ್ರಹಿಸಲು ಮುಂದಾಗಿವೆ.

    ರೋಸ್ ಗಾರ್ಡನ್​ನಲ್ಲಿ ನಡೆದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಪತ್ರಕರ್ತರು ಅಧ್ಯಕ್ಷ ಟ್ರಂಪ್​ಗೆ ಜರ್ಮನಿ ಮಾದರಿಯಲ್ಲೇ ಪರಿಹಾರವನ್ನು ನೀವೂ ಕೇಳ್ತೀರಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಟ್ರಂಪ್​, ನಾವಿನ್ನೂ ನಷ್ಟದ ಪ್ರಮಾಣವನ್ನು, ಪರಿಹಾರ ಕೇಳಬೇಕಾದ ಮೊತ್ತದ ಲೆಕ್ಕಾಚಾರವನ್ನೂ ಮಾಡಿಲ್ಲ. ಆದರೆ, ನೀವು ಜಗತ್ತನ್ನೊಮ್ಮೆ ನೋಡಿ. ಜಾಗತಿಕವಾಗಿ ಎಷ್ಟೊಂದು ನಾಶ-ನಷ್ಟಗಳಾಗಿವೆ. ಅಮೆರಿಕಕ್ಕೆ ಹೆಚ್ಚಿನ ಹಾನಿ ಆಗಿದೆ. ಇದು ಜಗತ್ತಿಗಾದ ಹಾನಿಯೂ ಹೌದು ಎಂದು ಸಮೀಕರಿಸಿದ್ದಾರೆ.

    ಸೋಂಕು ಹರಡುವುದಕ್ಕೆ ಕಾರಣವಾದ ಚೀನಾವನ್ನು ಹೊಣೆಗಾರನನ್ನಾಗಿ ಮಾಡುವುದಕ್ಕೆ ಸಾಕಷ್ಟು ಕಾರಣಗಳೂ ಇವೆ, ದಾರಿಗಳೂ ಇವೆ. ಬಹುಶಃ ನಿಮಗೆ ತಿಳಿದೇ ಇರುವಂತೆ ನಾವು ಚೀನಾ ವಿರುದ್ಧ ಗಂಭೀರವಾದ ತನಿಖೆಯನ್ನೇ ನಡೆಸುತ್ತೇವೆ. ಮೂಲದಲ್ಲೇ ತಡೆಯಬಹುದಾಗಿದ್ದ ದುರಂತವನ್ನು ಈ ಮಟ್ಟಕ್ಕೆ ಬಿಟ್ಟ ಚೀನಾದ ನಡೆ ನಮಗೆ ಖುಷಿ ಕೊಟ್ಟಿಲ್ಲ. ತ್ವರಿತವಾಗಿ ಚೀನಾ ಇದನ್ನು ತಡೆಯಬಹುದಾಗಿತ್ತು. ಕ್ಷಿಪ್ರ ನಿರ್ಣಯ ತೆಗೆದುಕೊಂಡಿದ್ದರೆ ಇದು ಜಗತ್ತಿಗೆ ವ್ಯಾಪಿಸುತ್ತಿರಲಿಲ್ಲ. ಸೂಕ್ತ ಕಾಲ ಮತ್ತು ಸಂದರ್ಭದಲ್ಲಿ ಉಳಿದ ವಿಚಾರಗಳನ್ನು ಬಹಿರಂಗಪಡಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ. (ಏಜೆನ್ಸೀಸ್​)

    VIDEO: ಆ್ಯಂಬುಲೆನ್ಸ್​ನಲ್ಲಿರುವ ರೋಗಿಗಿಂತಲೂ ವಿಐಪಿಗೇ ಅರ್ಜೆಂಟ್​ ಜಾಸ್ತಿ!: ಚೆನ್ನೈನಲ್ಲಿ ಪ್ರೂವ್​ ಆಗಿದೆ ಇದು!

    ಚೀನಾದ ಎರಡು ಕಂಪನಿಗಳು ಕಳುಹಿಸುವ COVID19 ಟೆಸ್ಟ್ ಕಿಟ್​ ಬಳಸಬೇಡಿ: ರಾಜ್ಯಗಳಿಗೆ ಐಸಿಎಂಆರ್​ ಎಚ್ಚರಿಕೆಯ ಸೂಚನೆ

    VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts