ಚೀನಾದ ಎರಡು ಕಂಪನಿಗಳು ಕಳುಹಿಸುವ COVID19 ಟೆಸ್ಟ್ ಕಿಟ್​ ಬಳಸಬೇಡಿ: ರಾಜ್ಯಗಳಿಗೆ ಐಸಿಎಂಆರ್​ ಎಚ್ಚರಿಕೆಯ ಸೂಚನೆ

ನವದೆಹಲಿ: ಎರಡು ಚೀನೀ ಕಂಪನಿಗಳು ಪೂರೈಸುವ COVID19 ಟೆಸ್ಟ್ ಕಿಟ್​ಗಳನ್ನು ಬಳಸಬೇಡಿ ಎಂದು ದ ಇಂಡಿಯನ್​ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ರಾಜ್ಯ ಸರ್ಕಾರಗಳಿಗೆ ತಿಳಿಸಿದೆ. ಒಂದೊಮ್ಮೆ ಈಗಾಗಲೇ ಈ ಕಂಪನಿಗಳಿಂದ ಟೆಸ್ಟ್ ಕಿಟ್​ಗಳನ್ನು ತರಿಸಿಕೊಂಡಿದ್ದಲ್ಲಿ ಬಳಸಬೇಡಿ ಎಂದೂ ಎಚ್ಚರಿಸಿದೆ. ಗುವಾಂಗ್​ಝು ವೊಂಡ್​ಫೋ ಬಯೋಟೆಕ್​ ಮತ್ತು ಝುಹೈ ಲಿವ್​ಝೋನ್​ ಡಯಾಗ್ನಾಸ್ಟಿಕ್ಸ್​ ಎಂಬ ಎರಡು ಕಂಪನಿಗಳ ವಿಚಾರವನ್ನು ಐಸಿಎಂಆರ್​ ಪ್ರತ್ಯೇಕವಾಗಿ ಸೂಚಿಸಿದೆ. ಈ ಕಂಪನಿಗಳು ಪೂರೈಸುವ ರಾಪಿಡ್​ ಆ್ಯಂಟಿಬಾಡಿ ಬ್ಲಡ್​ ಟೆಸ್ಟ್​ ಕಿಟ್​ಗಳ ವಿಚಾರವನ್ನೂ ಐಸಿಎಂಆರ್​ ಉಲ್ಲೇಖಿಸಿದೆ. … Continue reading ಚೀನಾದ ಎರಡು ಕಂಪನಿಗಳು ಕಳುಹಿಸುವ COVID19 ಟೆಸ್ಟ್ ಕಿಟ್​ ಬಳಸಬೇಡಿ: ರಾಜ್ಯಗಳಿಗೆ ಐಸಿಎಂಆರ್​ ಎಚ್ಚರಿಕೆಯ ಸೂಚನೆ