More

    ಚೀನಾದ ಎರಡು ಕಂಪನಿಗಳು ಕಳುಹಿಸುವ COVID19 ಟೆಸ್ಟ್ ಕಿಟ್​ ಬಳಸಬೇಡಿ: ರಾಜ್ಯಗಳಿಗೆ ಐಸಿಎಂಆರ್​ ಎಚ್ಚರಿಕೆಯ ಸೂಚನೆ

    ನವದೆಹಲಿ: ಎರಡು ಚೀನೀ ಕಂಪನಿಗಳು ಪೂರೈಸುವ COVID19 ಟೆಸ್ಟ್ ಕಿಟ್​ಗಳನ್ನು ಬಳಸಬೇಡಿ ಎಂದು ದ ಇಂಡಿಯನ್​ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ರಾಜ್ಯ ಸರ್ಕಾರಗಳಿಗೆ ತಿಳಿಸಿದೆ. ಒಂದೊಮ್ಮೆ ಈಗಾಗಲೇ ಈ ಕಂಪನಿಗಳಿಂದ ಟೆಸ್ಟ್ ಕಿಟ್​ಗಳನ್ನು ತರಿಸಿಕೊಂಡಿದ್ದಲ್ಲಿ ಬಳಸಬೇಡಿ ಎಂದೂ ಎಚ್ಚರಿಸಿದೆ.

    ಗುವಾಂಗ್​ಝು ವೊಂಡ್​ಫೋ ಬಯೋಟೆಕ್​ ಮತ್ತು ಝುಹೈ ಲಿವ್​ಝೋನ್​ ಡಯಾಗ್ನಾಸ್ಟಿಕ್ಸ್​ ಎಂಬ ಎರಡು ಕಂಪನಿಗಳ ವಿಚಾರವನ್ನು ಐಸಿಎಂಆರ್​ ಪ್ರತ್ಯೇಕವಾಗಿ ಸೂಚಿಸಿದೆ. ಈ ಕಂಪನಿಗಳು ಪೂರೈಸುವ ರಾಪಿಡ್​ ಆ್ಯಂಟಿಬಾಡಿ ಬ್ಲಡ್​ ಟೆಸ್ಟ್​ ಕಿಟ್​ಗಳ ವಿಚಾರವನ್ನೂ ಐಸಿಎಂಆರ್​ ಉಲ್ಲೇಖಿಸಿದೆ.

    COVID19 ಡಯಾಗ್ನೋಸಿಸ್ ಮಾಡಲು ಆರ್​ಟಿ-ಪಿಸಿಆರ್​ ಥ್ರೋಟ್​/ನಾಸಲ್ ಸ್ವೆಟ್​ ಟೆಸ್ಟ್ ಅತ್ಯುತ್ತಮವಾದುದು. ಮುಂಚಿತವಾಗಿಯೇ ವೈರಸ್​ನ ಇರುವಿಕೆಯನ್ನು ಈ ಟೆಸ್ಟ್​ ಪತ್ತೆ ಹಚ್ಚುತ್ತದೆ. ಅಲ್ಲದೆ, ಸೋಂಕು ತಗುಲಿರುವ ವ್ಯಕ್ತಿಯನ್ನು ಮುಂಚಿತವಾಗಿಯೇ ಗುರುತಿಸಿ ಅವರನ್ನು ಪ್ರತ್ಯೇಕವಾಗಿ ಐಸೋಲೇಷನ್ ವಾರ್ಡ್​ನಲ್ಲಿ ಇರಿಸಲು ಇದು ಸಹಕಾರಿ ಎಂದು ಐಸಿಎಂಆರ್ ಸಲಹಾ ಮಾರ್ಗಸೂಚಿಯಲ್ಲಿ ತಿಳಿಸಿದೆ.

    ಅವರವರ ಬೇಡಿಕೆಗೆ ಅನುಗುಣವಾಗಿ ಆಯಾ ರಾಜ್ಯಗಳು ತಮಗೆ ಬೇಕಾದ ಆ್ಯಂಟಿಬಾಡಿ ಟೆಸ್ಟ್​ ಕಿಟ್​​ಗಳನ್ನು ಸಂಗ್ರಹಿಸಿಕೊಂಡಿವೆ. ಐಸಿಎಂಆರ್ ಕೂಡ ಕೆಲವು ರಾಜ್ಯಗಳಿಗೆ ಇಂತಹ ಕಿಟ್​ಗಳನ್ನು ಪೂರೈಸಿದೆ. ಈ ಕಿಟ್​ಗಳನ್ನು ನಿಗಾ ಉದ್ದೇಶಕ್ಕೆ ಮಾತ್ರವೇ ಬಳಸಬೇಕೆಂಬ ಸೂಚನೆಯನ್ನೂ ಐಸಿಎಂಆರ್ ನೀಡಿದೆ. ಟೆಸ್ಟಿಂಗ್ ಸಂದರ್ಭದಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಕೆಲವು ರಾಜ್ಯಗಳು ಸ್ವರ ಎತ್ತಿವೆ. ಈ ಹಿನ್ನೆಲೆಯಲ್ಲಿ ಕಿಟ್​ಗಳನ್ನು ಪರಿಶೀಲಿಸಲಾಗಿದ್ದು, ಇದರಂತೆ ಗುವಾಂಗ್​ಝು ವೊಂಡ್​ಫೋ ಬಯೋಟೆಕ್​ ಮತ್ತು ಝುಹೈ ಲಿವ್​ಝೋನ್​ ಡಯಾಗ್ನಾಸ್ಟಿಕ್ಸ್​ ಎಂಬ ಎರಡು ಕಂಪನಿಗಳ ಕಿಟ್​ಗಳು ನಿಗಾ ವ್ಯವಸ್ಥೆಗೆ ಪೂರಕವಾಗಿ ಬಳಸಲು ಸೂಕ್ತವಲ್ಲ ಎಂಬುದು ಪತ್ತೆಯಾಗಿದೆ ಎಂದು ಐಸಿಎಂಆರ್ ತಿಳಿಸಿದೆ. (ಏಜೆನ್ಸೀಸ್​)

    VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts