More

    VIDEO: ಆ್ಯಂಬುಲೆನ್ಸ್​ನಲ್ಲಿರುವ ರೋಗಿಗಿಂತಲೂ ವಿಐಪಿಗೇ ಅರ್ಜೆಂಟ್​ ಜಾಸ್ತಿ!: ಚೆನ್ನೈನಲ್ಲಿ ಪ್ರೂವ್​ ಆಗಿದೆ ಇದು!

    ಚೆನ್ನೈ: ಸಾಮಾನ್ಯವಾಗಿ ಆ್ಯಂಬುಲೆನ್ಸ್​ನಲ್ಲಿ ರೋಗಿಗಳನ್ನು ಕರೆದೊಯ್ಯುತ್ತಾರೆ ಎಂದರೆ ಯಾವುದೋ ಆರೋಗ್ಯ ತುರ್ತು ಪರಿಸ್ಥಿತಿಯೇ ಇರುತ್ತದೆ. ಆದರೆ, ಆ ತುರ್ತುಪರಿಸ್ಥಿತಿಗಿಂತಲೂ ವಿಐಪಿಗಳ ಎಮರ್ಜೆನ್ಸಿಯೆ ಹೆಚ್ಚಾಗಿರುತ್ತದೆ. ಇದು ಪದೇಪದೇ ಸಾಬೀತಾಗುತ್ತಿರುವ ವಿಚಾರ. ಅಂಥದ್ದೇ ಘಟನೆ ಚೆನ್ನೈನಲ್ಲೂ ನಡೆದು ಮತ್ತೊಮ್ಮೆ ವಿಐಪಿಗಳಿಗೇ ಹೆಚ್ಚು ತುರ್ತು ಎಂಬುದು ಸಾಬೀತಾಗಿದೆ!

    ತುರ್ತಾಗಿ ಆಸ್ಪತ್ರೆಗೆ ಹೋಗುತ್ತಿದ್ದ ಆ್ಯಂಬುಲೆನ್ಸ್ ಒಂದನ್ನು ಚೆನ್ನೈನಲ್ಲಿ ಪೊಲೀಸರು ತಡೆದು, ವಿಐಪಿ ಕಾನ್​ವೇ ಹೋಗುವುದಕ್ಕೆ ದಾರಿ ಮಾಡಿಕೊಟ್ಟ ಶಾಕಿಂಗ್ ಘಟನೆ ಸೋಮವಾರ ನಡೆದಿದೆ. ಇದು ನಗರದ ಐಲ್ಯಾಂಡ್ ಗ್ರೌಂಡ್ಸ್​ ಸಮೀಪ ನಡೆದಿದೆ. ಪೊಲೀಸರು ಆ್ಯಂಬುಲೆನ್ಸ್ ಜತೆಗೆ ಇತರೆ ವಾಹನಗಳನ್ನೂ ತಡೆದು ನಿಲ್ಲಿಸಿದ ವಿಡಿಯೋ ವೈರಲ್ ಆಗಿದೆ.

    ವಿಐಪಿಗಳ ಸುಗಮ ಸಂಚಾರಕ್ಕೆ ಪೊಲೀಸರು ರಸ್ತೆ ಮಧ್ಯೆ ಬ್ಯಾರಿಕೇಡ್​ ಅಳವಡಿಸಿರುವ ದೃಶ್ಯವೂ ವಿಡಿಯೋದಲ್ಲಿದೆ. ಈ ವಿಡಿಯೋವನ್ನು ಎಎನ್​ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. (ಏಜೆನ್ಸೀಸ್)

    VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts