More

    ಬಿರಿಯಾನಿಯಲ್ಲಿ ಬೆಕ್ಕಿನ ಮಾಂಸ ಬಳಕೆ!? ಶಾಕಿಂಗ್​ ವಿಡಿಯೋ ವೈರಲ್, ರಹಸ್ಯ ಭೇದಿಸಿದ ಪ್ರಾಣಿ ಪ್ರಿಯ

    ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನ ಹಲವೆಡೆ ಬಿರಿಯಾನಿಯಲ್ಲಿ ಬೆಕ್ಕಿನ ಮಾಂಸವನ್ನು ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಾಣಿ ಪ್ರಿಯರೊಬ್ಬರು ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ್ದು, ಬೀದಿಯಲ್ಲಿ ವಾಸಿಸುವ ಪ್ರಾಣಿಗಳಿಗೆ ನಗರದಲ್ಲಿ ಸುರಕ್ಷತೆ ಇಲ್ಲದಂತಾಗಿದೆ ಎಂದು ಧ್ವನಿ ಎತ್ತಿದ್ದಾರೆ.

    ಪ್ರಾಣಿ ಪ್ರಿಯನನ್ನು ಜೋಶುವಾ ಎಂದು ಗುರುತಿಸಲಾಗಿದೆ. ತಾನೇ ಪ್ರತ್ಯಕ್ಷಸಾಕ್ಷಿ ಎಂದಿರುವ ಜೋಶುವಾ, ಚೆನ್ನೈನ ಪೆರಂಬೂರಿನಲ್ಲಿರುವ ನಾರಿಕುರವರ್ಸ್​ನಲ್ಲಿ ರಾತ್ರಿ ವೇಳೆ ನಡೆದ ಶಾಕಿಂಗ್​ ಘಟನೆಯೊಂದನ್ನು ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ. ಮಧ್ಯರಾತ್ರಿಯಲ್ಲಿ ಒಬ್ಬ ವ್ಯಕ್ತಿ ವಾಹನಕ್ಕೆ ಒಂದರ ಹಿಂದೆ ಒಂದಂತೆ ಚೀಲಗಳನ್ನು ತುಂಬುತ್ತಿರುವುದನ್ನು ನಾನು ನೋಡಿದೆ. ಅನುಮಾನಗೊಂಡು ಆತನ ಬಳಿಗೆ ನಾನು ಹೋಗುವಷ್ಟರಲ್ಲಿ ಆತ ಚೀಲಗಳನ್ನು ಮರೆಮಾಡುತ್ತಿದ್ದನು. ಆತನ ಎದುರು ನಿಂತಾಗ, ಬೆಕ್ಕುಗಳನ್ನು ಹಿಡಿದುಕೊಂಡು ಹೋಗಲು ಅಲ್ಲಿಗೆ ಬಂದಿರುವುದಾಗಿ ಹೇಳಿದನು.

    ಮಾತಿನ ಮಧ್ಯೆ ಆ ವ್ಯಕ್ತಿ ನನ್ನನ್ನು ನೂಕಿ ಅಲ್ಲಿಂದ ಪರಾರಿಯಾದನು. ಸುಮಾರು ಮೂರು ಕಿ.ಮೀ ವರೆಗೆ ಚೇಸ್​ ಮಾಡಿ, ಬೀದಿ ಬದಿ ಬೆಕ್ಕುಗಳ ಕಳ್ಳತನದ ಹಿಂದಿರುವ ಸತ್ಯವನ್ನು ಕಂಡುಕೊಂಡೆ. ತನ್ನಿಂದ ತಪ್ಪಿಸಿಕೊಂಡ ವ್ಯಕ್ತಿ ಬೇರೊಂದು ಸ್ಥಳದಲ್ಲಿಯೂ ಯಾವುದೇ ಪಶ್ಚಾತಾಪವಿಲ್ಲದೆ ಅದೇ ಕೃತ್ಯದಲ್ಲಿ ತೊಡಗಿದ್ದ. ಬೆಕ್ಕುಗಳನ್ನು ಏಕೆ ಕಿಡ್ನಾಪ್​ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದಾಗ, ಆರಂಭದಲ್ಲಿ ಆತನಿಂದ ಉತ್ತರ ಬರಲಿಲ್ಲ. ಆದರೆ, ಬೆಕ್ಕುಗಳನ್ನು ಸ್ವತಂತ್ರಗೊಳಿಸಲು ಪ್ರತಿ ಬೆಕ್ಕಿಗೆ 100 ರೂಪಾಯಿ ಕೇಳಿದನು. ಇದೇ ನನ್ನ ಕೆಲಸ ಎಂದನು. ಆ ಬಳಿಕ ಬೆಕ್ಕಿನ ಮಾಂಸಕ್ಕಾಗಿ ಕಳ್ಳತನ ಮಾಡುತ್ತಿರುವುದು ತಿಳಿಯಿತು.

    ಈ ಘಟನೆ ನಡೆದ ಮರುದಿನ ಬೀದಿಗಿಳಿದ ಜೋಶುವಾ, 10-15 ಬೆಕ್ಕುಗಳನ್ನು ಅಪಹರಿಸಿ ಗೋಣಿಚೀಲದಲ್ಲಿ ತುಂಬಿ ಎಸ್ಕೇಪ್​ ಆಗುತ್ತಿದ್ದ ಗ್ಯಾಂಗ್​ ಹಿಡಿದು ಕಂಡು ಅವುಗಳನ್ನು ಬಿಡುಗಡೆ ಮಾಡಿದರು. ರಸ್ತೆ ಬದಿಯ ಬಿರಿಯಾನಿ ಅಂಗಡಿ, ಹೋಟೆಲ್‌ಗಳಿಗೆ ಬೆಕ್ಕುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇಂತಹ ಘಟನೆಗಳನ್ನು ನಾನು ಹಲವು ಬಾರಿ ನೋಡಿದ್ದೇನೆ ಎಂದು ಜೋಶುವಾ ಹೇಳಿದ್ದಾರೆ.

    ಇಂತಹ ಕೃತ್ಯಗಳನ್ನು ತಡೆಯಿರಿ ಎಂದು ಪೊಲೀಸ್​ ಇಲಾಖೆಯನ್ನು ಜೋಶುವಾರ ಒತ್ತಾಯ ಮಾಡಿದ್ದಾರೆ. ಇಂತಹ ಕೃತ್ಯಗಳನ್ನು ನಿಲ್ಲಿಸದಿದ್ದರೆ, ಭವಿಷ್ಯದಲ್ಲಿ ಬೆಕ್ಕುಗಳನ್ನು ಕಾರ್ಟೂನ್ ಅಥವಾ ಪ್ರಾಣಿ ಸಂಗ್ರಹಾಲಯಗಳಲ್ಲಿ ಮಾತ್ರ ನೋಡಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    1964ರಲ್ಲಿ ಅಂಬಾಸಿಡರ್​ ಕಾರಿನ ಬೆಲೆ ಇಷ್ಟು ಕಡಿಮೆನಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

    ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ: ಧೋನಿ ವಿರುದ್ಧ ಅಸಮಾಧಾನ ಹೊರಹಾಕಿದ ಇರ್ಫಾನ್​ ಪಠಾಣ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts