1964ರಲ್ಲಿ ಅಂಬಾಸಿಡರ್​ ಕಾರಿನ ಬೆಲೆ ಇಷ್ಟು ಕಡಿಮೆನಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

ನವದೆಹಲಿ: ಅಂಬಾಸಿಡರ್​ ಕಾರಿನ ಬಗ್ಗೆ ಭಾರತೀಯರಿಗೆ ವಿಶೇಷವಾಗಿ ಪರಿಚಯ ಮಾಡುವ ಅಗತ್ಯವಿಲ್ಲ. ಹಿಂದಿನ ಕಾಲದ ಮಾಸ್ಟರ್​ ಪೀಸ್​ ಇದು. ಈ ಕಾರುಗಳನ್ನು ಹೆಚ್ಚಾಗಿ ರಾಜಕಾರಣಿಗಳು ಬಳಸುತ್ತಿದ್ದರು. ಸಿನಿಮಾಗಳಲ್ಲಂತೂ ವ್ಯಾಪಕವಾಗಿ ತೋರಿಸಲಾಗುತ್ತಿತ್ತು. ಆಗಿನ ಕಾಲದಲ್ಲಿ ರಾಜಕಾರಣಿಗಳಿಂದ ಹಿಡಿದು ಆಡಳಿತದಲ್ಲಿ ಇರುವವರೆಲ್ಲ ಈ ಕಾರನ್ನು ಉಪಯೋಗಿಸುತ್ತಿದ್ದರು. ಹಾಗಾಗಿಯೇ ಈ ಕಾರನ್ನು ಆ ಕಾಲದಲ್ಲಿ “ಭಾರತೀಯ ರಸ್ತೆಗಳ ರಾಜ” ಎಂದು ಕರೆಯಲಾಗುತ್ತಿತ್ತು. ಈಗಲೂ ಅನೇಕರು ಈ ಕಾರನ್ನು ಬಳಸುತ್ತಿದ್ದಾರೆ. ಹಿಂದೂಸ್ತಾನ್ ಮೋಟಾರ್ಸ್ 1957ರಲ್ಲಿ ಅಂಬಾಸಿಡರ್ ಕಾರನ್ನು ಬಿಡುಗಡೆ ಮಾಡಿತು. ಇದು ಬ್ರಿಟಿಷ್ … Continue reading 1964ರಲ್ಲಿ ಅಂಬಾಸಿಡರ್​ ಕಾರಿನ ಬೆಲೆ ಇಷ್ಟು ಕಡಿಮೆನಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!