ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 300 ಅಂಶ ಏರಿಕೆ, ನಿಫ್ಟಿ 12,900 ಮೇಲಕ್ಕೆ..

NSE BSE 20 DEC 19
Published on

ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​​ಎಸ್​ಇ ನಿಫ್ಟಿ ಸೂಚ್ಯಂಕಗಳು ಇಂದು ಕೂಡ ಲಾಭಾಂಶದಲ್ಲೇ ಮುಂದುವರಿದಿವೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 300 ಅಂಶಕ್ಕೂ ಅಧಿಕ ಏರಿಕೆ ದಾಖಲಿಸಿದರೆ, ನಿಫ್ಟಿ 12,900 ಮೇಲಕ್ಕೇರಿದೆ.

ವಾರ ಆರಂಭದ ದಿನವಾದ ಸೋಮವಾರ ಬೆಳಗ್ಗೆ ವಹಿವಾಟು ಶುರುವಾಗುತ್ತಲೇ ಸೆನ್ಸೆಕ್ಸ್ ಇಂಟ್ರಾ ಡೇ ವಹಿವಾಟಿನಲ್ಲಿ ಸಾರ್ವಕಾಲಿಕ 44,271.15 ಅಂಶ ತಲುಪಿತ್ತು. ನಿನ್ನೆಗಿಂತ ಇಂದು ಆರಂಭಕ್ಕೆ 309.36 ಅಂಶ ಏರಿಕೆ ದಾಖಲಿಸಿದೆ. ಇದೇ ರೀತಿ ನಿಫ್ಟಿ ಕೂಡ 83.85 ಅಂಶ ಏರಿಕೆಯಾಗಿದ್ದು್, 12,942.90 ಅಂಶದಲ್ಲಿ ವಹಿವಾಟು ಮುಂದುವರಿಸಿತ್ತು.

ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂಡಸ್ ಇಂಡ್ ಬ್ಯಾಂಕ್ ಷೇರು ಶೇಕಡ 5 ಏರಿಕೆ ದಾಖಲಿಸಿದರೆ, ಬಜಾಜ್ ಫಿನ್​ಸರ್ವ್​, ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್​, ಒಎನ್​ಜಿಸಿ, ಎನ್​ಟಿಪಿಸಿ, ಟಾಟಾ ಸ್ಟೀಲ್ ಷೇರುಗಳು ಲಾಭಾಂಶದಲ್ಲಿ ವಹಿವಾಟು ಮುಂದುವರಿಸಿವೆ. ಇದೇ ವೇಳೆ, ಎಚ್​ಡಿಎಫ್​ಸಿ, ಏಷ್ಯನ್ ಪೇಂಟ್ಸ್, ಐಟಿಸಿ, ಭಾರ್ತಿ ಏರ್ಟೆಲ್​ ಷೇರುಗಳು ನಷ್ಟ ಅನುಭವಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net