ಯೋಧನ ಪತ್ನಿಯ ಜೀವ ಕಸಿದ ವಿಡಿಯೋಕಾಲ್​- ಬೈಕ್​ನಲ್ಲಿ ಹೋಗುವಾಗ ಅವಘಡ

bagalkote-new
Published on

ಬಾಗಲಕೋಟೆ: ಬೈಕ್​ನಲ್ಲಿ ಹೋಗುತ್ತಿರುವ ಸಮಯದಲ್ಲಿ ವಿಡಿಯೋಕಾಲ್​ನಲ್ಲಿ ಮಾತನಾಡುತ್ತಾ ಹೋದ ಕಾರಣ, ಯೋಧನ ಪತ್ನಿಯೊಬ್ಬರು ಬೈಕ್​ನಿಂದ ಬಿದ್ದು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಮೂಗನೂರು ಬಳಿ ನಡೆದಿದೆ.

ಬಾದಾಮಿ ತಾಲೂಕಿನ ತಿಮ್ಮಸಾಗರ ಗ್ರಾಮದ‌ ನಿವಾಸಿ ಯೋಧ ಶೇಖರಯ್ಯ ವಿಭೂತಿ ಅವರ ಪತ್ನಿ ಪುಷ್ಪಲತಾ (35) ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.

ಶೇಖರಯ್ಯ ಅವರು ಪತ್ನಿಯನ್ನು ಬೈಕ್​ನಲ್ಲಿ ಕೂಡಿಸಿಕೊಂಡು ಬಾದಾಮಿ ತಾಲೂಕಿನ ತಿಮ್ಮಸಾಗರದಿಂದ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮಕ್ಕೆ ಹೊರಟಿದ್ದರು. ಅವರು ಮನೆಗೆ ಬರುವುದು ವಿಳಂಬ ಆಯಿತು ಎನ್ನುವ ಕಾರಣಕ್ಕೆ ಅವರ ಮಗ ತಂದೆಗೆ ವಿಡಿಯೋ ಕಾಲ್ ಮಾಡಿದ್ದಾನೆ.

ಬೈಕ್​ ಚಲಾಯಿಸುತ್ತಲೇ ಶೇಖರಯ್ಯ ವಿಡಿಯೋಕಾಲ್​ ಅಟೆಂಡ್​ ಮಾಡಿದ್ದಾರೆ. ಅವರು ಮಾತನಾಡುತ್ತಿದ್ದ ಸಮಯದಲ್ಲಿ ಹಂಪ್ಸ್​ ಬಂದದ್ದು ಅವರ ಗಮನಕ್ಕೆ ಬರಲಿಲ್ಲ. ಹಂಪ್ಸ್​ ದಾಟುತ್ತಿದ್ದ ವೇಳೆ ಆಯತಪ್ಪಿ ಹಿಂದೆ ಕುಳಿತಿದ್ದ ಪುಷ್ಪಲತಾ ಅವರು ಕೆಳಕ್ಕೆ ಬಿದ್ದಿದ್ದಾರೆ.

ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಇಂದು ಶೇಖರಯ್ಯ ಅವರು ಜಮ್ಮುಕಾಶ್ಮೀರಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ನಿನ್ನೆ ಈ ದುರ್ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net