

ನವದೆಹಲಿ: ಭಾರತದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ನಿಶ್ಚಿತ ಠೇವಣಿ(ಎಫ್ಡಿ) ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಉಳಿತಾಯ ಖಾತೆಗೆ ಇದುವರೆಗೆ ಇದ್ದ ಮಿನಿಮಂ ಬ್ಯಾಲೆನ್ಸ್ ಮೊತ್ತವನ್ನು ರದ್ದುಗೊಳಿಸಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದ ಬ್ಯಾಂಕ್, ಇದೀಗ ಬಡ್ಡಿದರವನ್ನು ಕಡಿತಗೊಳಿಸಿ ನಿಶ್ಚಿತ ಠೇವಣಿದಾರರಿಗೆ ಕಹಿ ಸುದ್ದಿ ನೀಡಿದೆ.
ಪರಿಷ್ಕೃತ ದರ ಮಾರ್ಚ್ 10ರಿಂದಲೇ ಜಾರಿಗೆ ಬಂದಿದೆ. ಕಳೆದ ಫೆಬ್ರವರಿ 10ರಂದು ಎಸ್‌ಬಿಐ ಎಫ್ಡಿ ಮೇಲಿನ ಬಡ್ಡಿದರ ಕಡಿತಗೊಳಿಸಿತ್ತು. ಪರಿಷ್ಕೃತ ದರದ ಪ್ರಕಾರ 7 ರಿಂದ 45 ದಿನದವರೆಗಿನ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರ ಶೇ. 4.5 ರಿಂದ 4ಕ್ಕೆ ಇಳಿಸಿದೆ. ಅದೇ ರೀತಿಯಾಗಿ 5 ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ. 6 ರಿಂದ 5.9ಕ್ಕೆ ಇಳಿಸಿದೆ. 5 ವರ್ಷದಿಂದ 10 ವರ್ಷಗಳವರೆಗೂ ಕೂಡ ಶೇ. 6 ರಿಂದ 5.9ಕ್ಕೆ ಇಳಿಸಿದೆ.
ಹಿರಿಯ ನಾಗರಿಕರು ಸಾಮಾನ್ಯ ಜನರಿಗೆ ನೀಡುವುದಕ್ಕಿಂತಲೂ 50 ಮೂಲ ಅಂಕಗಳೊಂದಿಗೆ ಹೆಚ್ಚಿನ ಬಡ್ಡಿದರ ಪಡೆಯುವುದನ್ನು ಮುಂದುವರಿಸಲಾಗುವುದು ಎಂದು ಎಸ್‌ಬಿಐ ತಿಳಿಸಿದೆ. ಆದರೆ, ಈ ದರ 2 ಕೋಟಿ ರೂ. ಗಿಂತ ಕಡಿಮೆ ನಿಶ್ಚಿತ ಠೇವಣಿಗೆ ಅನ್ವಯವಾಗಲಿದೆ ಎಂದು ಎಸ್‌ಬಿಐ ಹೇಳಿದೆ.
1. ಎಸ್‌ಬಿಐ ಪ್ರಸ್ತುತ ನಿಶ್ಚಿತ ಠೇವಣಿ ದರ(ಸಾಮಾನ್ಯರಿಗೆ)
2. ಎಸ್‌ಬಿಐ ಪ್ರಸ್ತುತ ನಿಶ್ಚಿತ ಠೇವಣಿ ದರ(ಹಿರಿಯ ನಾಗರಿಕರಿಗೆ)
ಎಸ್‌ಬಿಐ ಪ್ರಸ್ತುತ ಪರಿಷ್ಕರಿಸಿರುವ ಬಡ್ಡಿದರ ಹೊಸ ಠೇವಣಿ ಮತ್ತು ನವೀಕೃತ ಮೆಚ್ಯುರಿಂಗ್ ಠೇವಣಿಗಳಿಗೆ ಅನ್ವಯವಾಗಲಿದೆ ಎಂದು ಎಸ್‌ಬಿಐ ತಿಳಿಸಿದೆ.
ಇದೀಗ ಎಸ್‌ಬಿಐ ಬಡ್ಡಿ ದರವನ್ನು ಕಡಿತಗೊಳಿಸಿರುವುದರಿಂದ ಇತರೆ ಬ್ಯಾಂಕ್ಗಳು ಕೂಡ ಇದೇ ಹಾದಿಯನ್ನು ತುಳಿಯಲಿವೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)