More

    ನೀವು ಎಸ್​ಬಿಐ ಗ್ರಾಹಕರೇ..? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ ನೋಡಿ..

    ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್​ಬಿಐ)ದ ಉಳಿತಾಯ ಖಾತೆದಾರರಿಗೆ ಒಂದು ಸಿಹಿ ಸುದ್ದಿ. ದೇಶದ ಮುಂಚೂಣಿ ಬ್ಯಾಂಕ್ ಎಸ್​ಬಿಐ ಬುಧವಾರ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಭಾರಿ ಪರಿಣಾಮ ಬೀರುವ ನಿರ್ಧಾರವನ್ನು ಪ್ರಕಟಿಸುವ ಮೂಲಕ ಕೋಟ್ಯಂತರ ಬ್ಯಾಂಕ್ ಗ್ರಾಹಕರಿಗೆ ಭಾರಿ ತಲೆನೋವನ್ನು ನಿವಾರಿಸಿದೆ.

    ಎಸ್​ಬಿಐ ಬುಧವಾರ ಈ ಸಿಹಿಸುದ್ದಿಯನ್ನು ಪ್ರಕಟಿಸಿದ್ದು, ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿರುವ ಕೋಟ್ಯಂತರ ಗ್ರಾಹಕರಿಗೆ ಅನುಕೂಲವಾಗುವ ನಿರ್ಣಯವೊಂದನ್ನು ಅದು ತೆಗೆದುಕೊಂಡಿದೆ. ಇದರಂತೆ ಉಳಿತಾಯ ಖಾತೆಗೆ ಇದುವರೆಗೆ ಇದ್ದ ಮಿನಿಮಂ ಬ್ಯಾಲೆನ್ಸ್ ಮೊತ್ತವನ್ನು ಬ್ಯಾಂಕ್​ ರದ್ದುಗೊಳಿಸಿದೆ. ಸರಾಸರಿ ಮಾಸಿಕ ಬ್ಯಾಲೆನ್ಸ್​(ಎಎಂಬಿ) ಮೇಲೂ ಇದು ಅನ್ವಯವಾಗಿದ್ದು, ಇನ್ನು ಮುಂದೆ ಎಎಂಬಿ ಮೇನ್​ಟೇನ್ ಮಾಡದೇ ಇದ್ದರೂ ತೊಂದರೆ ಇಲ್ಲ. ಹೀಗಾಗಿ 44.51 ಕೋಟಿ ಉಳಿತಾಯ ಖಾತೆದಾರರಿಗೆ ಎಸ್​ಬಿಐ ನಿರ್ಣಯ ಸಹಕಾರಿ ಆಗಲಿದೆ.

    ಪ್ರಸ್ತುತ ಎಸ್​ಬಿಐ ಸೇವಿಂಗ್ಸ್ ಬ್ಯಾಂಕ್ ಗ್ರಾಹಕರು ಮೆಟ್ರೋ ನಗರಗಳಲ್ಲಾದರೆ ಮಾಸಿಕ 3,000 ರೂಪಾಯಿ, ಅರೆ ನಗರಗಳಾಗಿದ್ದರೆ 2,000 ರೂಪಾಯಿ, ಗ್ರಾಮೀಣ ಪ್ರದೇಶದಲ್ಲಾದರೆ 1,000 ರೂಪಾಯಿ ಕನಿಷ್ಠ ಬ್ಯಾಲೆನ್ಸ್​ ನಿರ್ವಹಿಸಬೇಕಾಘಿತ್ತು. ಮಿನಿಮಂ ಬ್ಯಾಲೆನ್ಸ್ ನಿರ್ವಹಿಸದ ಬ್ಯಾಂಕ್ ಖಾತೆಗಳ ಮೇಲೆ 5 ರೂಪಾಯಿಯಿಂದ 15 ರೂಪಾಯಿ ತನಕ ದಂಡವನ್ನೂ ಅದು ವಿಧಿಸುತ್ತಿತ್ತು. ಇದಕ್ಕೆ ತೆರಿಗೆಯನ್ನೂ ಪ್ರತ್ಯೇಕವಾಗಿ ಗ್ರಾಹಕರು ತೆರಬೇಕಾಗಿತ್ತು. ಗ್ರಾಹಕರಿಗೆ ಇನ್ನು ಈ ತಲೆನೋವು ಇಲ್ಲ.

    ಇದೇ ರೀತಿ ಇನ್ನೊಂದು ಮಹತ್ವದ ನಿರ್ಧಾರವನ್ನೂ ಅದು ತೆಗೆದುಕೊಂಡಿದ್ದು, ಸೇವಿಂಗ್ಸ್ ಬ್ಯಾಂಕ್ ಅಕೌಂಟ್​​ಗಳ ಬಡ್ಡಿದರವನ್ನು ಫ್ಲ್ಯಾಟ್ ಆಗಿ ಎಲ್ಲ ಖಾತೆಗಳಿಗೂ ಶೇಕಡ 3 ಎಂದು ನಿಗದಿ ಮಾಡಿದೆ. ಪ್ರಸ್ತುತ ಒಂದು ಲಕ್ಷ ರೂಪಾಯಿ ಒಳಗಿನ ಠೇವಣಿ ಹೊಂದಿರುವ ಎಸ್​ಬಿ ಖಾತೆಗಳಿಗೆ ಶೇಕಡ 3.25 ಮತ್ತು ಒಂದು ಲಕ್ಷ ರೂಪಾಯಿ ಮೇಲ್ಪಟ್ಟ ಠೇವಣಿ ಹೊಂದಿರುವ ಎಸ್​ಬಿ ಖಾತೆಗಳಿಗೆ ಶೇಕಡ 3ರ ಬಡ್ಡಿದರ ಚಾಲ್ತಿಯಲ್ಲಿತ್ತು. ಇನ್ನು ಮುಂದೆ ಎಲ್ಲದಕ್ಕೂ ಒಂದೇ ಬಡ್ಡಿದರವಾಗಿ ಶೇಕಡ 3 ಚಾಲ್ತಿಯಲ್ಲಿ ಇರಲಿದೆ. (ಏಜೆನ್ಸೀಸ್)

    ಮಿಷನ್ ಮಧ್ಯಪ್ರದೇಶ ಆಯಿತು… ಬಿಜೆಪಿ ಅಜೆಂಡಾದಲ್ಲಿ ಮುಂದಿನದು ರಾಜಸ್ಥಾನ?

    ಮಧ್ಯಪ್ರದೇಶ ಬಿಕ್ಕಟ್ಟಿಗೆ ಒಂದು ಟ್ವಿಸ್ಟ್ ಕಾದಿದೆ ನೋಡಿ ಎಂದ ಕಾಂಗ್ರೆಸ್ ನಾಯಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts