ಜಿಯೋ ಪ್ಲಾಟ್​ಫಾರಂನಲ್ಲಿ ಹೂಡಿಕೆಯಾಗ್ತಿದೆ ಸೌದಿ ಸಂಪತ್ತು

Jio-and-PIF
Published on

ನವದೆಹಲಿ: ದೇಶದ ಮುಂಚೂಣಿ ಉದ್ಯಮ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಜಿಯೋ ಪ್ಲಾಟ್​ಫಾರಂನಲ್ಲಿ ಸೌದಿಯ ಸಂಪತ್ತು ಹೂಡಿಕೆಯಾಗುತ್ತಿದೆ. ತ್ವರಿತಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಜಿಯೋ ಫ್ಲಾಟ್​ಫಾರಂನಲ್ಲಿ ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್​ಮೆಂಟ್ ಫಂಡ್​(ಪಿಐಎಫ್) ಹೂಡಿಕೆ ಮಾಡಲು ಮುಂದಾಗಿದೆ.

ಗುರುವಾರ ಘೋಷಿಸಲ್ಪಟ್ಟಿರುವ ಮಾಹಿತಿ ಪ್ರಕಾರ, ಜಿಯೋ ಫ್ಲಾಟ್​ಫಾರಂನ ಶೇಕಡ 2.32 ಈಕ್ವಿಟಿಯನ್ನು ಪಿಐಎಫ್​ ಹೊಂದಲಿದ್ದು, ಇದಕ್ಕಾಗಿ ಅದು 11,360 ಕೋಟಿ ರೂಪಾಯಿ(1.49 ಬಿಲಿಯನ್ ಡಾಲರ್​)ಯನ್ನು ಹೂಡಿಕೆ ಮಾಡಲಿದೆ. ಈ ಹೂಡಿಕೆಯೊಂದಿಗೆ ಜಿಯೋ ಪ್ಲಾಟ್​ಫಾರಂ 2020ರ ಏಪ್ರಿಲ್​ನಿಂದೀಚೆಗೆ 1,15,693.95 ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡಂತಾಗಿದೆ.

ಪಿಐಎಫ್ ಹೊರತುಪಡಿಸಿ, ಫೇಸ್​ಬುಕ್​, ಸಿಲ್ವರ್ ಲೇಕ್​, ವಿಸ್ತಾ ಈಕ್ವಿಟಿ ಪಾರ್ಟನರ್ಸ್, ಜನರಲ್​ ಅಟ್ಲಾಂಟಿಕ್​, ಕೆಕೆಆರ್​, ಮುಬದಾಲಾ, ಎಡಿಐಎ, ಟಿಪಿಜಿ ಮತ್ತು ಎಲ್​ ಕಾಟರ್​ಟನ್​ ಈವರೆಗಿನ ಹೂಡಿಕೆದಾರರು. ಜಿಯೋ ಪ್ಲಾಟ್​ಫಾರಂನಲ್ಲಿ ಈ ಹೂಡಿಕೆ ಮೌಲ್ಯ 4.91 ಲಕ್ಷ ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಉದ್ಯಮ ಮೌಲ್ಯ 5.16 ಲಕ್ಷ ಕೋಟಿ ರೂಪಾಯಿ ಆಗಿರಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net