ರೈಲ್ವೆ ಸ್ಟಾಲ್​ಗಳಲ್ಲಿ ಸಿಗಲಿದೆ ಕರೊನಾ ತಡೆ ಅಗತ್ಯವಸ್ತುಗಳು

h31-Railway 4
Published on

ನವದೆಹಲಿ: ರೈಲ್ವೆ ಪ್ಲಾಟ್​ಫಾರಂಗಳಲ್ಲಿ ಇರುವ ರೈಲ್ವೆ ಸ್ಟಾಲ್​ಗಳಲ್ಲಿ ಇನ್ನು ಮುಂದೆ ಮಾಸ್ಕ್​, ಗ್ಲೌಸ್​, ಸ್ಯಾನಿಟೈಸರ್​, ಬೆಡ್​ ರೋಲ್ ಕಿಟ್​​ ಸೇರಿ ಕರೊನಾ ವೈರಸ್​ ತಡೆಗೆ ಅಗತ್ಯವಿರುವ ಎಲ್ಲ ವಸ್ತುಗಳು ಲಭ್ಯ ಇರಲಿವೆ ಎಂದು ರೈಲ್ವೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ರೈಲ್ವೆ ಮಂಡಳಿ ಪ್ರಕಟಿಸಿರುವ ಸೂಚನೆ ಅನ್ವಯ ರೈಲ್ವೆ ಸ್ಟಾಲ್​ಗಳು ಕರೊನಾ ವೈರಸ್ ತಡೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲಿವೆ. ಬಹುತೇಕ ರೈಲ್ವೆ ಸ್ಟಾಲ್​ಗಳನ್ನು ಖಾಸಗಿಯವರು ನಿರ್ವಹಿಸುತ್ತಿದ್ದಾರೆ. ಇಲ್ಲಿ ನೈರ್ಮಲಕ್ಕೆ ಸಂಬಂಧಿಸಿದ ಸಾಮಗ್ರಿಗಳು, ಪುಸ್ತಕಗಳು, ಔಷಧಗಳು ಮತ್ತು ಪ್ಯಾಕ್ಡ್​ ಫುಡ್​ ಗಳನ್ನು ಮಾರಾಟ ಮಾಡುತ್ತಾರೆ.

ದೂರ ಪ್ರಯಾಣದ ರೈಲುಗಳಲ್ಲಿ ಬೆಡ್​ ರೋಲ್​ಗಳನ್ನು ಈ ಮೊದಲು ಒದಗಿಸಲಾಗುತ್ತಿತ್ತು. ಇತ್ತೀಚೆಗೆ ಅದನ್ನು ನಿಲ್ಲಿಸಿರುವ ಕಾರಣ ಪ್ರಯಾಣಿಕರೇ ಅವನ್ನು ತರಬೇಕಾಗಿದೆ. ಅಕಸ್ಮಾತ್ ತರುವುದನ್ನು ಮರೆತರೆ ಸ್ಟಾಲ್​​ಗಳಿಂದ ಬೆಡ್​ರೋಲ್ ಕಿಟ್ ಖರೀದಿಸಬಹುದು. ಅದರನಲ್ಲಿ ಒಂದು ಪಿಲ್ಲೋ, ಅದರ ಕವರ್​, ಬ್ಲಾಂಕೆಟ್ಸ್​, ಫೇಸ್​ ಟವೆಲ್ ಇದೆ. ರೈಲು ಪ್ರಯಾಣಿಕರು ಮನೆಯಿಂದ ಹೊರಟು ಬರುವಾಗ ಒಂದೊಮ್ಮೆ ಕರೊನಾ ವೈರಸ್​ ತಡೆಗೆ ಸಂಬಂಧಿಸಿದ ಅಗತ್ಯವಸ್ತುಗಳನ್ನು ಮರೆತು ಬಂದರೆ ಅಂಥವರು ಈ ಸ್ಟಾಲ್​ಗಳಿಂದು ಅವುಗಳನ್ನು ಖರೀದಿಸಿ ಬಳಸಬಹುದಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net