1 ಜಿಬಿಪಿಎಸ್​ಗೂ ಅಧಿಕ ವೇಗದಲ್ಲಿ 5ಜಿ ತಂತ್ರಜ್ಞಾನ ಪ್ರಯೋಗ ಯಶಸ್ವಿ: ಜಿಯೋ-ಕ್ವಾಲ್ಕಾಮ್​ ಸಹಭಾಗಿತ್ವ

In this photo illustration a 5g mobile Spectrum logo
INDIA - 2020/07/15: In this photo illustration a 5g mobile Spectrum logo displayed on a smartphone with a Jio Digital life logo in the background. (Photo Illustration by Avishek Das/SOPA Images/LightRocket via Getty Images)
Published on

ನವದೆಹಲಿ: ಅಮೆರಿಕದ ಮುಂಚೂಣಿ ಟೆಕ್ ಕಂಪನಿ ಕ್ವಾಲ್ಕಾಮ್ ಮತ್ತು ಭಾರತದ ಮುಂಚೂಣಿಯ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ 1 ಜಿಬಿಪಿಎಸ್​ಗೂ ಅಧಿಕ ವೇಗದಲ್ಲಿ ಸೇವೆ ಒದಗಿಸುವ 5ಜಿ ತಂತ್ರಜ್ಞಾನವನ್ನು ಅಮೆರಿಕದಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದೆ. ಪ್ರಸ್ತುತ ಅಮೆರಿಕ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಸ್ವಿಜರ್ಲೆಂಡ್ ಮತ್ತು ಜರ್ಮನಿಯಂಥ ಕೆಲವು ದೇಶಗಳಲ್ಲಿ ಮಾತ್ರವೇ 5 ಜಿ ಗ್ರಾಹಕರಿಗೆ ಜಿಬಿಪಿಎಸ್ ವೇಗದ ಸೇವೆಯನ್ನು ಟೆಲಿಕಾಂ ಕಂಪನಿಗಳು ನೀಡುತ್ತಿವೆ ಎಂದು ಜಿಯೋ ಘಟಕದ ಅಧ್ಯಕ್ಷ ಮ್ಯಾಥ್ಯೂ ಉಮ್ಮನ್ ಹೇಳಿದ್ದಾರೆ.

ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಬಳಕೆದಾರರಿಗೆ ಸೂಪರ್​ಫಾಸ್ಟ್ 1 ಜಿಬಿಪಿಎಸ್ ವೇಗದ ಸೇವೆ ಒದಗಿಸುವ ಗುರಿಯನ್ನು ಜಿಯೋ ಹೊಂದಿದೆ. ಜಿಯೋ ಹಾಗೂ ಕ್ವಾಲ್ಕಾಮ್ ಸಂಸ್ಥೆ ಭಾರತದಲ್ಲಿ ಸ್ಥಳೀಯ 5ಜಿ ನೆಟ್​ವರ್ಕ್ ಮೂಲಸೌಕರ್ಯ ಸೌಲಭ್ಯ ಮತ್ತು ಸೇವೆಗಳ ತ್ವರಿತ ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ಕೆಲಸ ಮಾಡುತ್ತಿವೆ. ಕ್ವಾಲ್ಕಾಮ್ ಸಹಯೋಗದೊಂದಿಗೆ 5ಜಿ ರಾನ್ ರೇಡಿಯೊ ಆಕ್ಸೆಸ್ ನೆಟ್​ವರ್ಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಅದರಲ್ಲೂ ಜಿಬಿಪಿಎಸ್ ವೇಗವನ್ನು ಪಡೆಯಬಹದು ಎಂದು ತಿಳಿಸಿದೆ.

ಈ ವರ್ಷದ ಆರಂಭದಲ್ಲಿ 730 ಕೋಟಿ ರೂ. ಹೂಡಿಕೆಯೊಂದಿಗೆ ರಿಲಯನ್ಸ್ ಜಿಯೋದಲ್ಲಿನ ಶೇ.0.15ರಷ್ಟು ಪಾಲನ್ನು ಕ್ವಾಲ್ಕಾಮ್ ಖರೀದಿಸಿದೆ. ಈ ಪ್ರಯೋಗ ಯಶಸ್ವಿಯಾಗುವುದರೊಂದಿಗೆ ಶೀಘ್ರವೇ ಭಾರತದಲ್ಲೂ 5ಜಿ ನೆಟ್​ವರ್ಕ್​ ಕೆಲಸ ಶುರುವಾಗುವ ನಿರೀಕ್ಷೆ ಇದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net