

ಎಷ್ಟೋ ಬಾರಿ ಖಾಸಗಿ/ಸಹಕಾರಿ ಬ್ಯಾಂಕ್ಗಳ ವ್ಯವಹಾರಗಳು ಗ್ರಾಹಕರಿಗೆ ಅರ್ಥವಾಗುವುದೇ ಇಲ್ಲ. ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಅವ್ಯವಹಾರದ ವಾಸನೆ ಎಳ್ಳಷ್ಟೂ ಬಡಿಯದಂತೆ ನೋಡಿಕೊಂಡು, ಗ್ರಾಹಕರ ಹಣ ಎಗರಿಸುವುದು ಗೊತ್ತೇ ಆಗುವುದಿಲ್ಲ. ಕೊನೆಗೊಂದು ದಿನ ಬ್ಯಾಂಕ್ ಮುಳುಗು ಸ್ಥಿತಿಗೆ ತಲುಪಿದಾಗ ಠೇವಣಿದಾರರ ಆಕ್ರಂದನ ಕೇಳಲು ಯಾರೂ ಇರುವುದಿಲ್ಲ. ಹಾಗಾದರೆ, ಇನ್ನುಮುಂದೆ ಇದಕ್ಕೆಲ್ಲ ಕಡಿವಾಣ ಬೀಳಲಿದೆಯೇ? ಖಾಸಗಿ/ಸಹಕಾರಿ ಬ್ಯಾಂಕುಗಳ ಎಲ್ಲ ವ್ಯವಹಾರಗಳನ್ನು ರಿಸರ್ವ್ ಬ್ಯಾಂಕ್ ಪರಿಧಿಯಲ್ಲಿಡುವ ‘ಬ್ಯಾಂಕಿಂಗ್ ನಿಯಂತ್ರಕ ತಿದ್ದುಪಡಿ ಮಸೂದೆ-2020’ಕ್ಕೆ ಸಂಸತ್ತು ಅನುಮೋದನೆ ನೀಡಿದೆ. ಈ ವಿಧೇಯಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪರಿವರ್ತನೆಗೆ ಹೇಗೆ ಕಾರಣವಾಗಲಿದೆ ಎಂದು ವಿವರಿಸಿದ್ದಾರೆ ವಿಜಯವಾಣಿ ದೆಹಲಿ ಪ್ರತಿನಿಧಿ ರಾಘವ ಶರ್ಮ ನಿಡ್ಲೆ.
ದೇಶದ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ತರುವ ನಿಟ್ಟಿನಲ್ಲಿ ಮಹತ್ವದ ಬ್ಯಾಂಕಿಂಗ್ ನಿಯಂತ್ರಕ ತಿದ್ದುಪಡಿ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆಯ ಅನುಮೋದನೆ ಸಿಕ್ಕಿದೆ. ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿನ್ನು ಸಂಪೂರ್ಣವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪರಿಧಿಗೆ ಬರಲಿವೆ. 1949ರಲ್ಲಿ ಬ್ಯಾಂಕಿಂಗ್ ನಿಯಂತ್ರಕ ಕಾಯ್ದೆ ಜಾರಿಗೆ ಬಂದಾಗ ಸಹಕಾರಿ ಬ್ಯಾಂಕುಗಳು ಆರ್ಬಿಐ ವ್ಯಾಪ್ತಿಯಲ್ಲಿ ಇರಲಿಲ್ಲ. ಈ ಕಾಯ್ದೆಗೆ 1965ರಲ್ಲಿ ತಿದ್ದುಪಡಿ ತರುವ ಮೂಲಕ ಸಹಕಾರಿ ಬ್ಯಾಂಕುಗಳನ್ನು ಆರ್ಬಿಐ ವ್ಯಾಪ್ತಿಗೆ ತರಲಾಗಿತ್ತು. ಹಿಂದಿನಿಂದಲೂ ಸಹಕಾರಿ ಬ್ಯಾಂಕ್ಗಳು ಇದ್ದವು. ಆರ್ಬಿಐ ವ್ಯಾಪ್ತಿ ಸೀಮಿತವಾಗಿದ್ದರಿಂದ ಸಹಕಾರಿ ಬ್ಯಾಂಕುಗಳ ಅವ್ಯವಹಾರಗಳಿಗೆ ಕಡಿವಾಣ ಸಾಧ್ಯವಾಗಿರಲಿಲ್ಲ. ಹೊಸ ತಿದ್ದುಪಡಿ ವಿಧೇಯಕದಲ್ಲಿ ಸೆಕ್ಷನ್ 3, 45 ಮತ್ತು 56ನ್ನು ಪರಿಷ್ಕರಿಸಲಾಗಿದೆ. ಇದರಿಂದ ವಾಣಿಜ್ಯ/ಸಹಕಾರಿ ಬ್ಯಾಂಕು ಮತ್ತು ಸೊಸೈಟಿಗಳು ನಡೆಸುವ ಸಣ್ಣಪುಟ್ಟ ಅವ್ಯವಹಾರಗಳೂ ಬೆಳಕಿಗೆ ಬರಲಿದ್ದು, ಗ್ರಾಹಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರವಹಿಸುವ ನಿರೀಕ್ಷೆಯಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೋಲಾಹಲ ಎಬ್ಬಿಸಿದ ಯೆಸ್ ಬ್ಯಾಂಕ್ ಹಗರಣದ ಬಳಿಕ ಖಾಸಗಿ/ಸಹಕಾರಿ ಬ್ಯಾಂಕುಗಳ ಅಕ್ರಮಗಳ ನಾಗಾಲೋಟಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ಈ ತಿದ್ದುಪಡಿ ವಿಧೇಯಕದಿಂದ ಖಾಸಗಿ/ಸಹಕಾರಿ ಬ್ಯಾಂಕುಗಳಲ್ಲಿ ‘ಗ್ರಾಹಕಸ್ನೇಹಿ ಪರಿಸರ’ ನಿರ್ವಣವಾಗಲಿದೆ ಎಂದು ಹೇಳಿದೆ. ದೇಶದಲ್ಲೀಗ 1934 ಸಹಕಾರಿ ಬ್ಯಾಂಕುಗಳಿದ್ದು, ಕಳೆದೆರೆಡು ದಶಕಗಳಲ್ಲಿ ಅವ್ಯವಹಾರ, ಹಣಕಾಸು ಕೊರತೆ ಕಾರಣಗಳಿಗಾಗಿ 430 ಸಹಕಾರಿ ಬ್ಯಾಂಕ್ಗಳ ಪರವಾನಗಿ ರದ್ದುಪಡಿಸಲಾಗಿದೆ. 2019-20 ಹಣಕಾಸು ವರ್ಷದಲ್ಲಿ 277 ಬ್ಯಾಂಕ್ಗಳು ನಷ್ಟದಲ್ಲಿದ್ದವು ಎಂಬ ಅಧಿಕೃತ ವರದಿಯಿದೆ. ಇದನ್ನೂ ಓದಿ: ಟಿಕ್ಟಾಕ್ ಡೀಲ್ಗೆ ಟ್ರಂಪ್ ಷರತ್ತು, ಪೂರ್ತಿ ಅವರಿಬ್ಬರ ಕಂಟ್ರೋಲ್ನಲ್ಲಿದ್ರೆ ಮಾತ್ರ ಓಕೆ!
ಕನಿಷ್ಠ 25 ಲಕ್ಷ ರೂ.ಬಂಡವಾಳವಿದ್ದರೆ ಸಹಕಾರಿ ಬ್ಯಾಂಕೊಂದನ್ನು ಆರಂಭಿಸಬಹುದು. ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಸಣ್ಣ ರೈತರು ಹಾಗೂ ಉದ್ಯಮಿಗಳಿಗೆ ಸಕಾಲದಲ್ಲಿ ಹಣಕಾಸು ನೆರವು/ಸಾಲ ನೀಡುವ ಉದ್ದೇಶದಿಂದಲೇ ಈ ಬ್ಯಾಂಕ್ಗಳು ಹುಟ್ಟಿಕೊಂಡವು. ಇತರ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರಿ ಬ್ಯಾಂಕ್ನಲ್ಲಿ ಅಧಿಕ ಬಡ್ಡಿ ಸಿಗುತ್ತದೆ. ಸಹಜವಾಗಿಯೇ ಇದು ಠೇವಣಿದಾರರನ್ನು ಆಕರ್ಷಿಸಿದವು. ಆದರೆ, ಕಾಲಾಂತರದಲ್ಲಿ ಹಲವು ಸಹಕಾರಿ ಬ್ಯಾಂಕುಗಳು ಮೂಲ ಉದ್ದೇಶ ಗಾಳಿಗೆ ತೂರಿ, ಅನರ್ಹ ವ್ಯಕ್ತಿ/ಸಂಸ್ಥೆಗಳಿಗೆ ಭದ್ರತೆಯಿಲ್ಲದೆ ಸಾಲ ನೀಡಿ, ಸ್ವಜನಪಕ್ಷಪಾತ, ಅವ್ಯವಹಾರ, ನಕಲಿ ಖಾತೆಗಳ ಸೃಷ್ಟಿ, ರಾಜ್ಯ ಸರ್ಕಾರಗಳ ಹಸ್ತಕ್ಷೇಪ, ರಾಜಕೀಯ ಪ್ರಭಾವದಿಂದಾಗಿ ಸೇರಿ ಹತ್ತಾರು ಅಕ್ರಮಗಳಿಗೆ ಕೈ ಹಾಕಿದವು. ಇದರಿಂದ ಠೇವಣಿದಾರರು ಬೀದಿಗೆ ಬಿದ್ದರು. ಹಾಗಂತ, ಎಲ್ಲ ಬ್ಯಾಂಕುಗಳು ಇದೇ ಹಾದಿಯಲ್ಲಿವೆ ಎಂದಲ್ಲ. ದುರಾಡಳಿತ ತೋರಿದ ಬ್ಯಾಂಕುಗಳಿಂದ ಸರಿ ದಾರಿಯಲ್ಲಿದ್ದ ಬ್ಯಾಂಕುಗಳಿಗೂ ಕೆಟ್ಟ ಹೆಸರು ಬಂದಿದೆ. ಬೆಂಗಳೂರಿನ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್, ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್, ಮಾಧವಪುರ ಮರ್ಚೆಂಟೈಲ್ ಕೋ ಆಪರೇಟಿವ್ ಬ್ಯಾಂಕ್, ಕೃಷಿ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್, ಚಾರ್ವಿುನಾರ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್, ನಾಗ್ಪುರ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್... ಹೀಗೆ ಹತ್ತು ಹಲವು ಬ್ಯಾಂಕ್ಗಳು ಹಗರಣದಲ್ಲಿ ಸಿಲುಕಿಕೊಂಡಿವೆ. ಇವುಗಳನ್ನು ನಂಬಿದ್ದ ಗ್ರಾಹಕರೀಗ ಕೋರ್ಟು-ಕಚೇರಿ ಅಲೆಯುವಂತಾಗಿದೆ. ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ/ಹಣ ಸಂಪಾದನೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯ, ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ವಿಚಾರಣೆ ಮಾಡಿದನ್ನಿಲ್ಲಿ ನೆನಪಿಸಿಕೊಳ್ಳಬಹುದು. ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಅಧ್ಯಕ್ಷತೆಯ ಕರ್ನಾಟಕ ಸ್ಟೇಟ್ ಅಪೆಕ್ಸ್ ಕೋ ಆಪರೇಟಿವ್ ಬ್ಯಾಂಕ್ ಹೆಬ್ಬಾಳ್ಕರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಗೆ ನಿಯಮಬಾಹಿರವಾಗಿ 215 ಕೋಟಿ ರೂ. ಸಾಲ ನೀಡಿದೆ ಎಂಬ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಈ ಮೂವರನ್ನೂ ವಿಚಾರಣೆ ಮಾಡಿದ್ದರು. ಮೂವರೂ ಒಂದೇ ಪಕ್ಷಕ್ಕೆ ಸೇರಿರುವುದರಿಂದ ಅನುಮಾನ ಮೂಡುವುದು ಸಹಜವೇ. ಇಂಥದ್ದೇ ಮಾದರಿಯಲ್ಲಿ ದೇಶದ ಹತ್ತಾರು ಸಹಕಾರಿ ಬ್ಯಾಂಕುಗಳು ಹಗರಣಕ್ಕೆ ಸಾಕ್ಷಿಯಾಗಿವೆ.
ರೈತರಿಗೆ ಅನುಕೂಲವಾಗಲೆಂದೇ ಯುಪಿಎ ಸರ್ಕಾರ ಮಹತ್ವಾಕಾಂಕ್ಷಿ ಸಾಲಮನ್ನಾ ಯೋಜನೆ ಜಾರಿಗೆ ತಂದಿತ್ತು. ಆದರೆ, ಹಲವು ಸಹಕಾರಿ ಬ್ಯಾಂಕುಗಳು ಸಾಲಮನ್ನಾ ಮಾಡಿರಲಿಲ್ಲ. ಬದಲಿಗೆ, ಬೋಗಸ್ ಖಾತೆಗಳನ್ನು ಸೃಷ್ಟಿಸಿ, ಅಲ್ಲಿಗೆ ಕೇಂದ್ರ ಸರ್ಕಾರ ಕೊಟ್ಟಿದ್ದ ಹಣ ವರ್ಗಾವಣೆ ಮಾಡಿದ್ದವು. ಇದರಲ್ಲಿ -ಠಿ; 3-4 ಸಾವಿರ ಕೋಟಿ ಹಗರಣ ನಡೆದಿರುವುದರ ಬಗ್ಗೆ ಅಂದಿನ ಕಂಟ್ರೋಲರ್ ಆಡಿಟರ್ ಜನರಲ್ (ಸಿಎಜಿ) ವರದಿ ನೀಡಿದ್ದರು. ಸಹಕಾರಿ ಬ್ಯಾಂಕುಗಳ ಆಡಳಿತ ಮಂಡಳಿಗಳು ತಮಗೆ ಬೇಕಾದ ವ್ಯಕ್ತಿಗಳಿಂದ ಬ್ಯಾಂಕಿನ ವಾರ್ಷಿಕ ಆಡಿಟ್ ನಡೆಸಿ, ಅಕ್ರಮಗಳನ್ನು ಮುಚ್ಚಿ ಹಾಕುತ್ತವೆ ಎಂಬ ಆರೋಪವಿದೆ. ಆದರೆ, ಇನ್ನುಮುಂದೆ ಇದಕ್ಕೆ ಆರ್ಬಿಐ ಕಡಿವಾಣ ಹಾಕಲಿದೆ. ಬ್ಯಾಂಕ್ ಬಗ್ಗೆ ಸಣ್ಣ ಅನುಮಾನವಿದ್ದರೂ ಆರ್ಬಿಐ ನೇಮಿಸಿದ ವ್ಯಕ್ತಿ ಆಡಿಟ್ ನಡೆಸಿ ವರದಿ ನೀಡಬೇಕು. ಇದನ್ನು ಸಹಕಾರಿ ಬ್ಯಾಂಕುಗಳು ಪ್ರಶ್ನಿಸುವಂತಿಲ್ಲ. ಇದನ್ನೂ ಓದಿ: ಯೂಟ್ಯೂಬ್ನಿಂದ ನಾಪತ್ತೆಯಾಗಿದ್ದ ಕೋಲುಮಂಡೆ ಸಾಂಗ್ ಬದಲಾವಣೆಯೊಂದಿಗೆ ಮರು ಬಿಡುಗಡೆ
ಪಿಎಂಸಿ ಕರ್ಮಕಾಂಡ
ಸಹಕಾರಿ ಬ್ಯಾಂಕ್ಗಳ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್ (ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್) ಆರ್ಥಿಕ ಅವ್ಯವಹಾರಗಳೇ ತಾಜಾ ಉದಾಹರಣೆ. ಪಿಎಂಸಿ ಬ್ಯಾಂಕ್ನಲ್ಲಿದ್ದ ಒಟ್ಟು -ಠಿ; 11 ಸಾವಿರ ಕೋಟಿ ಡೆಪಾಸಿಟ್ ಹಣದಲ್ಲಿ -ಠಿ; 6226 ಕೋಟಿ ಹಣವನ್ನು ಹೌಸಿಂಗ್ ಡೆವಲಪ್ವೆುಂಟ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಗೆ (ಎಚ್ಡಿಐಎಲ್) ಸಾಲದ ರೂಪದಲ್ಲಿ ನೀಡಲಾಗಿತ್ತು. ಇಷ್ಟೊಂದು ಹಣವನ್ನು ಯಾವುದೇ ಭದ್ರತೆ ಇಲ್ಲದೆ ನೀಡಿದ್ದೇಕೆ ಎಂದು ತನಿಖೆ ನಡೆಸಿದಾಗ ಎಚ್ಡಿಐಎಲ್ ಕಂಪನಿಯ ಷೇರಿನಲ್ಲಿ ಪಿಎಂಸಿ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಶೇ.1.9ರಷ್ಟು ಪಾಲನ್ನು ಹೊಂದಿರುವುದು ಬೆಳಕಿಗೆ ಬಂತು. ಅಂದರೆ ಇದೊಂದು ಪಕ್ಕಾ ್ಚn್ಝ್ಚ ಟ್ಛ ಜ್ಞಿಠಿಛ್ಟಿಛಿಠಠಿ ಕೇಸು. ಆರ್ಬಿಐ ಈ ಬಗ್ಗೆ ತನಿಖೆ ನಡೆಸಿದಾಗ, ಎಚ್ಡಿಐಎಲ್ಗೆ -ಠಿ; 440 ಕೋಟಿ ಹಣ ವರ್ಗಾವಣೆ ಕುರಿತ ಮಾಹಿತಿ ಸಿಕ್ಕಿತು. ಅಂದರೆ, ಉಳಿದ 5786 ಕೋಟಿ ಹಣವನ್ನು 21 ಸಾವಿರ ಬೋಗಸ್ ಖಾತೆಗಳನ್ನು ತೆರೆಯುವ ಮೂಲಕ ವರ್ಗಾಯಿಸಲಾಗಿದೆ! ಅಲ್ಲಿಗೆ, ಗ್ರಾಹಕರ ಹಣವೆಲ್ಲವನ್ನೂ ತಿಮಿಂಗಿಲಗಳಂತೆ ನುಂಗಲಾಗಿದೆ. ಬ್ಯಾಂಕ್ ಮುಳುಗಡೆ ಸ್ಥಿತಿಯಲ್ಲಿದೆ. ಬ್ಯಾಂಕ್ನ 9 ಲಕ್ಷಕ್ಕೂ ಹೆಚ್ಚು ಠೇವಣಿದಾರರು, ‘ನಮ್ಮ ಹಣ ಕೊಡಿಸಿ’ ಎಂದು ಸರ್ಕಾರಗಳ ದುಂಬಾಲು ಬಿದ್ದಿದ್ದಾರೆ. ದುರಂತ ಎಂದರೆ, ಅಖಿಲ ಭಾರತ ರಿಸರ್ವ್ ಬ್ಯಾಂಕ್ ನೌಕರರ ಸಂಘ ಮತ್ತು ಆರ್ಬಿಐ ಹೌಸಿಂಗ್ ಅಸೋಸಿಯೇಷನ್ ಸದಸ್ಯರೂ (ಹೆಚ್ಚು ಬಡ್ಡಿ ಸಿಗುತ್ತದೆ ಎಂಬ ಕಾರಣಕ್ಕಾಗಿ) 100-500 ಕೋಟಿ ರೂ.ವರೆಗೆ ಪಿಎಂಸಿ ಬ್ಯಾಂಕ್ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಖಾಸಗಿ/ಸಹಕಾರಿ ಬ್ಯಾಂಕು ಗಳ ರೆಗ್ಯುಲೇಟರ್ಗಳಾಗಿ (ನಿಯಂತ್ರಕ) ಕೆಲಸ ಮಾಡುವ ಆರ್ಬಿಐ ಸಿಬ್ಬಂದಿ/ಅಧಿಕಾರಿಗಳೇ ಈ ಹಗರಣದ ಬಲಿಪಶುಗಳಾಗಿರುವುದು ಪರಿಸ್ಥಿತಿಯ ವ್ಯಂಗ್ಯ!
ಹಗರಣದಿಂದ ತತ್ತರಿಸಿದ ಯೆಸ್ ಬ್ಯಾಂಕ್ ರಿಸರ್ವ್ ಬ್ಯಾಂಕ್ ಹಸ್ತಕ್ಷೇಪದಿಂದ ನಿಧಾನಕ್ಕೆ ಉಸಿರಾಡುತ್ತಿದೆ. ಕರೊನಾ ಲಾಕ್ಡೌನ್ ಬಳಿಕವಂತೂ ಆರ್ಥಿಕ ಬಿಕ್ಕಟ್ಟು ತಾರಕಕ್ಕೇರಿರುವುದರಿಂದ ದೇಶದ ವಾಣಿಜ್ಯ/ಸಹಕಾರಿ ಬ್ಯಾಂಕ್ಗಳು ಯಾವ ಕ್ಷಣದಲ್ಲಿ ಬೇಕಾದರೂ ಮುಳುಗಬಹುದು ಎಂಬ ಆತಂಕ ವಿದೆ. ಇದನ್ನು ತಪ್ಪಿಸುವ ಉದ್ದೇಶದಿಂದಲೇ ಬ್ಯಾಂಕಿಂಗ್ ನಿಯಂತ್ರಕ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸದ್ಯ ದೇಶದಲ್ಲಿರುವ ಎಲ್ಲ ಬ್ಯಾಂಕ್ಗಳಲ್ಲಿ ಅಂದಾಜು -ಠಿ; 78 ಲಕ್ಷ ಕೋಟಿ ಡೆಪಾಸಿಟ್ ಹಣವಿದೆ. ಇದರಲ್ಲಿ ಸಹಕಾರಿ ಬ್ಯಾಂಕ್ಗಳ ಪಾಲು ಅಂದಾಜು -ಠಿ; 10 ಲಕ್ಷ ಕೋಟಿ. ಅದರಲ್ಲಿ 7.5 ಲಕ್ಷ ಕೋಟಿ ರೂ. ಹಣವನ್ನು ಸಾಲ/ಮುಂಗಡ ಸಾಲದ ರೂಪದಲ್ಲಿ ವಿತರಿಸಲಾಗಿದೆ. ಸಹಕಾರಿ ಬ್ಯಾಂಕ್/ಸೊಸೈಟಿಗಳು 8 ಕೋಟಿ ಠೇವಣಿದಾರರನ್ನು ಹೊಂದಿದ್ದು, ಬಹುತೇಕರು ಮಧ್ಯಮ, ಕೆಳ ಮಧ್ಯಮ ಮತ್ತು ಬಡ ವರ್ಗದವರೇ ಆಗಿದ್ದಾರೆ. ಅವರ ವಿಶ್ವಾಸ ಕಳೆದುಕೊಳ್ಳಬಾರದೆಂದೇ ಆಡಳಿತಕ್ಕೆ ಚುರುಕು ಮುಟ್ಟಿಸಿ, ಬ್ಯಾಂಕ್ನ್ನು ಭದ್ರಗೊಳಿಸಲು ವಿಧೇಯಕ ನೆರವಾಗಲಿದೆ. ವಿಧೇಯಕದ ಪ್ರಕಾರ ಬ್ಯಾಂಕ್ ಆಡಳಿತ ಮಂಡಳಿಗೆ ಸ್ವತಂತ್ರ ವ್ಯಕ್ತಿಗಳ ನೇಮಕವಾಗಲಿದೆ. ಅವರು ಬೇರೆಲ್ಲೂ ಪಾಲುದಾರಿಕೆ (ಷೇರು) ಹೊಂದುವಂತಿಲ್ಲ. ಈವರೆಗೆ ವಾಣಿಜ್ಯ, ಬಹು-ರಾಜ್ಯ ಕೋ ಆಪರೇಟಿವ್ ಬ್ಯಾಂಕ್ಗಳ ಆಡಳಿತ ಮಂಡಳಿ ಮೇಲೆ ಆರ್ಬಿಐ ನಿಯಂತ್ರಣವಿರುತ್ತಿತ್ತು. ಆದರೆ, ಇನ್ನುಮುಂದೆ ಬಹು-ರಾಜ್ಯ ವಿಸ್ತರಣೆ ಹೊಂದಿರದ ಸಹಕಾರಿ ಬ್ಯಾಂಕುಗಳ ಆಡಳಿತ ಮಂಡಳಿಯೂ ಆರ್ಬಿಐ ವ್ಯಾಪ್ತಿಯಲ್ಲಿರಲಿದೆ.
‘ಬ್ಯಾಂಕಿಂಗ್ ನಿಯಂತ್ರಕ ತಿದ್ದುಪಡಿ ವಿಧೇಯಕ 2020’ನ್ನು ಕಾಂಗ್ರೆಸ್ ವಿರೋಧಿಸಿದೆ. ಸಂಸದ ಮನೀಶ್ ತಿವಾರಿ ಸೇರಿ ಹಲವರು ಭಿನ್ನಾಭಿಪ್ರಾಯಗಳನ್ನು ಲೋಕಸಭೆ ಮುಂದಿರಿಸಿದ್ದಾರೆ. ಆದರೆ, ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ನೇತೃತ್ವದ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ ನೀಡಿದ್ದ ವರದಿಯಲ್ಲಿ ‘ಜನಸಾಮಾನ್ಯರಿಂದ ಠೇವಣಿ ಪಡೆದುಕೊಳ್ಳುವ ಪ್ರತಿಯೊಂದು ಹಣಕಾಸು ಸಂಸ್ಥೆಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪರಿಧಿಗೆ ತರಬೇಕು. ಇದರಿಂದ ಬ್ಯಾಂಕುಗಳ ಅಕ್ರಮಕ್ಕೆ ಲಗಾಮು ಹಾಕಬಹುದು’ ಎಂದು ಶಿಫಾರಸು ಮಾಡಲಾಗಿತ್ತು. ಈ ಸಮಿತಿಯಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕೂಡ ಸದಸ್ಯರಾಗಿದ್ದರು ಎಂಬುದು ಗಮನಾರ್ಹ.