ಇಲ್ಲಿ ಪೆಟ್ರೋಲ್​ಗೆ ಕೇವಲ 25 ರೂಪಾಯಿ!

petrole price
petrol pump
Published on

ಮೈಸೂರು: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇವಲ 25 ರೂ.ಗೆ ಒಂದು ಲೀಟರ್ ಪೆಟ್ರೋಲ್ ನೀಡುವ ಮೂಲಕ ನಗರದಲ್ಲಿ ಶುಕ್ರವಾರ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿತು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕುವೆಂಪುನಗರದಲ್ಲಿ ಸ್ಕೂಟರ್​ಗೆ ಪೆಟ್ರೋಲ್ ಹಾಕುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಇಳಿದಿರುವುದರಿಂದ 25-30 ರೂ.ಗೆ ಪೆಟ್ರೋಲ್ ನೀಡಬಹುದು. ಆದರೆ, ಕೇಂದ್ರಸರ್ಕಾರಕ್ಕೆ ಬಡವರ ಕಷ್ಟ ಗೊತ್ತಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಸದ್ಯ 18.60 ರೂ. ಮೂಲಬೆಲೆಯಲ್ಲಿ ಪೆಟ್ರೋಲ್ ಸಿಗುತ್ತಿದ್ದು, ತೆರಿಗೆ ಸೇರಿ 30 ರೂ.ಗೆ ಮಾರ ಬಹುದು. ಆದರೆ ಸರ್ಕಾರ 80 ರೂ.ಗೆ ಮಾರುತ್ತಿರುವುದರಿಂದ ದುಪ್ಪಟ್ಟು ದರ ವಿಧಿಸಿದಂತಾಗಿದೆ. ತೈಲ ಬೆಲೆ ಏರಿದರೆ ಇನ್ನಿತರ ವಸ್ತುಗಳ ಬೆಲೆಯೂ ಏರಿ ಜನರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಹೆಚ್ಚುವರಿ ತೆರಿಗೆ ಕಡಿತ ಮಾಡಿ ಕಡಿಮೆ ಬೆಲೆಗೆ ಪೆಟ್ರೋಲ್-ಡೀಸೆಲ್ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net