ಪಿಪಿಎಫ್​ನಿಂದ ಹಿಡಿದು ಎನ್​ಎಸ್​ಸಿ ತನಕ ಇನ್ನು ಒಂದೇ ಅರ್ಜಿ ಭರ್ತಿ ಮಾಡಿದರೆ ಸಾಕು

POST
Published on

ನವದೆಹಲಿ: ರಾಷ್ಟ್ರೀಯ ಉಳಿತಾಯ ಯೋಜನೆಗಳಾದ ಪಿಪಿಎಫ್​, ಎನ್​ಎಸ್​ಸಿ, ಕೆವಿಪಿ, ಸುಕನ್ಯಾ ಸಮೃದ್ಧಿ, ಮಾಸಿಕ ಆದಾಯ ಖಾತೆ, ಟೈಮ್ ಡೆಪಾಸಿಟ್ಸ್​, ಎಸ್​ಸಿಎಸ್​ಎಸ್ ಮುಂತಾದವುಗಳಿಗೆ ಅನ್ವಯವಾಗುವಂತೆ ಒಂದೇ ಅರ್ಜಿ ನಮೂನೆಯನ್ನು ಅಂಚೆ ಇಲಾಖೆ ಪರಿಚಯಿಸಿದೆ.

ಇದರಂತೆ, ಪಿಪಿಎಫ್​, ಎನ್​ಎಸ್​ಇ ಮುಂತಾದವುಗಳಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ಹೊಸ ಉಳಿತಾಯ ಖಾತೆ ತೆರೆಯುವುದಕ್ಕೂ ಅರ್ಜಿ ನಮೂನೆ ಒಂದೇ ಆಗಿರಲಿದೆ. ಇದೇ ರೀತಿ ಅಂಚೆ ಇಲಾಖೆಯಲ್ಲಿನ ಆರ್​ಡಿ, ಪಿಪಿಎಫ್​, ಎಸ್​ಸಿಎಸ್​ಎಸ್​ ಮುಂತಾದ ಹೂಡಿಕೆಗಳ ಅವಧಿ ವಿಸ್ತರಣೆಗೂ ಒಂದೇ ಅರ್ಜಿ ನಮೂನೆ ಇರಲಿದೆ. ಹೊಸ ಖಾತೆ ತೆರೆಯುವ ಅರ್ಜಿ ನಮೂನೆ ಕೋರ್ ಬ್ಯಾಂಕಿಂಗ್ ಸೊಲುಷನ್ ಮತ್ತು ಇತರೆ ಸಿಬಿಎಸ್​ಯೇತರ ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯುವುದಕ್ಕೆ ಇರುವ ಅರ್ಜಿ ನಮೂನೆಯೂ ಒಂದೇ ಆಗಿರುತ್ತದೆ. ಇದೇ ನಮೂನೆಯಲ್ಲಿ ಸೇವಿಂಗ್ಸ್ ಅಕೌಂಟ್​, ಆರ್​ಡಿ ಅಥವಾ 1,2,3,5 ವರ್ಷಗಳ ಅವಧಿಯ ಟೈಮ್ ಡೆಪಾಸಿಟ್ ಆರಂಭಿಸುವುದಕ್ಕೂ , ಎಂಐಎಸ್​, ಎಸ್​ಸಿಎಸ್​ಎಸ್​, ಪಿಪಿಎಫ್​, ಕೆವಿಪಿ, ಎನ್​ಎಸ್​ಸಿ ಖಾತೆ ತೆರೆಯಲೂ ಬಳಸಬಹುದಾಗಿದೆ.

ಇದಕ್ಕೂ ಮುನ್ನ 2019ರ ಡಿಸೆಂಬರ್​ನಲ್ಲಿ ಖಾತೆ ತೆರೆಯುವ, ಸಾಲದ ಅರ್ಜಿ ಅಥವಾ ಖಾತೆ ಅವಧಿ ವಿಸ್ತರಣೆಗೆ ಸಂಬಂಧಿಸಿ ಹೊಸ ಅರ್ಜಿ ನಮೂನೆ ಪರಿಚಯಿಸಿತ್ತು ಅಂಚೆ ಇಲಾಖೆ. 2019ರ ನಿಯಮ ಪ್ರಕಾರ ಪರಿಷ್ಕೃತ ಅರ್ಜಿ ನಮೂನೆಯನ್ನು ಇಲಾಖೆ ಸ್ವೀಕರಿಸಲಿದೆ. ಸಾಮಾನ್ಯ ಅರ್ಜಿ ನಮೂನೆಗಳಿವು

1. ಖಾತೆ ತೆರೆಯಲು ಅಥವಾ ಸರ್ಟಿಫಿಕೇಟರ್ ಖರೀದಿಗೆ ಬಳಸುವ ಅರ್ಜಿ ನಮೂನೆ

2. ಪೇ ಇನ್ ಸ್ಲಿಪ್​ (ಹಣ ಪಾವತಿ ಅರ್ಜಿ - SB-103)

3. ಮೆಚುರಿಟಿ ಆದ ಖಾತೆ ಮುಚ್ಚಲು ಇರುವ ಅರ್ಜಿ ನಮೂನೆ (SB-7A)

4. ಅವಧಿಗೂ ಮೊದಲೆ ಖಾತೆ ಮುಚ್ಚುಲು ಇರುವ ಅರ್ಜಿ ನಮೂನೆ (SB-7B)

5. ಸಾಲಕ್ಕಾಗಿ/ ಆರ್​ಡಿಯಿಂದ ಹಣ ನಗದೀಕರಿಸಲು/ಆರ್​ಡಿ/ ಪಿಪಿಎಫ್​ ಮತ್ತು ಎಸ್​ಎಸ್​ಎ ಖಾತೆಗಳಿಂದ ಹಣ ಹಿಂಪಡೆಯಲು ಇರುವ ಅರ್ಜಿ ನಮೂನೆ (SB-7C)

6. ಆರ್​ಡಿ/ಟಿಡಿ/ಪಿಪಿಎಫ್​/ಎಸ್​ಸಿಎಸ್​ಎಸ್​ ಖಾತೆಗಳ ಅವಧಿ ವಿಸ್ತರಣೆಗೆ ಅರ್ಜಿ

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net