ಗಗನಕ್ಕೇರುತ್ತಿದೆ ಇಂಧನ ಬೆಲೆ - ಪೆಟ್ರೋಲ್​, ಡೀಸೆಲ್​ ದರಗಳು ಎರಡು ವರ್ಷದ ಗರಿಷ್ಠ ಮಟ್ಟಕ್ಕೆ

Petrol price
Published on

ನವದೆಹಲಿ: ಪೆಟ್ರೋಲಿಯಂ ಇಂಧನಗಳ ಬೆಲೆ ಗಗನಕ್ಕೇರುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಎರಡು ವರ್ಷಗಳ ಅವಧಿಯಲ್ಲಿ ಗರಿಷ್ಠ ಮಟ್ಟ ತಲುಪಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ ಇಂದು 28 ಪೈಸೆ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರಿಗೆ 29 ಪೈಸೆ ಹೆಚ್ಚಳವಾಗಿದೆ.

ದೆಹಲಿಯಲ್ಲಿ ಸತತ ಐದನೇ ದಿನ ಬೆಲೆ ಏರಿಕೆಯಾಗಿದ್ದು ಪೆಟ್ರೋಲ್ ದರ ಲೀಟರಿಗೆ 83.13 ರೂಪಾಯಿಯಿಂದ 83.41 ರೂಪಾಯಿಗೂ ಡೀಸೆಲ್ ಬೆಲೆ 73.32 ರೂಪಾಯಿಯಿಂದ 73.61 ರೂಪಾಯಿಗೆ ಹೆಚ್ಚಳವಾಗಿದೆ. ಮುಂಬೈನಲ್ಲೂ ಪೆಟ್ರೋಲ್​ ಬೆಲೆ 90 ರೂಪಾಯಿ, ಡೀಸೆಲ್ ದರ 80 ರೂಪಾಯಿ ಗಡಿ ದಾಟಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 29 ಪೈಸೆ ಏರಿಕೆಯಾಗಿದ್ದು, 86.20 ರೂಪಾಯಿ ತಲುಪಿದೆ. ನಿನ್ನೆ 85.91 ರೂಪಾಯಿ ಇತ್ತು. ಐದೇ ದಿನದಲ್ಲಿ 1.11 ರೂಪಾಯಿ ಲೀಟರ್ ಮೇಲೆ ಏರಿಕೆಯಾಗಿದೆ. ಇದೇ ರೀತಿ ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ 30 ಪೈಸೆ ಹೆಚ್ಚಳವಾಗಿ 78.03 ರೂಪಾಯಿ ತಲುಪಿದೆ. ನಿನ್ನೆ 77.73 ರೂಪಾಯಿ ಇತ್ತು. ಒಟ್ಟು ಐದು ದಿನಗಳಲ್ಲಿ 1.26 ರೂಪಾಯಿ ಹೆಚ್ಚಳವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net