

ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಮಂಗಳವಾರ 15ರಿಂದ 24 ಪೈಸೆವರೆಗೆ ಇಳಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 17 ಪೈಸೆ ಇಳಿಕೆಯಾಗಿ ಪ್ರತಿ ಲೀಟರ್ಗೆ 81.55 ರೂ. ತಲುಪಿದೆ. ಡೀಸೆಲ್ ದರ 22 ಪೈಸೆ ಇಳಿಕೆಯಾಗಿ ಲೀಟರ್ಗೆ 72.56 ರೂ. ತಲುಪಿದೆ.
ಮುಂಬೈನಲ್ಲಿ ಪೆಟ್ರೋಲ್ 88.21 ರೂ., ಡೀಸೆಲ್ 79.05 ರೂ., ಕೋಲ್ಕತದಲ್ಲಿ ಪೆಟ್ರೋಲ್ 83.06 ರೂ., ಡೀಸೆಲ್ 76.06 ರೂ., ಚೆನ್ನೈನಲ್ಲಿ ಪೆಟ್ರೋಲ್ 84.57 ರೂ. ಹಾಗೂ ಡೀಸೆಲ್ 77.91 ರೂ. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ದರ್ಜೆಯ ಕಚ್ಚಾತೈಲ ಬೆಲೆ ಶೇಕಡ 0.10 ಇಳಿಕೆಯಾಗಿ ಪ್ರತಿ ಬ್ಯಾರೆಲ್ಗೆ 39.68 ಡಾಲರ್ ಆಗಿದೆ. ವೆಸ್ಟ್ ಟೆಕ್ಸಾಸ್ ಮೀಡಿಯೆಟ್ ದರ್ಜೆಯ ಕಚ್ಚಾತೈಲ ಬೆಲೆ ಶೇ.0.15 ಇಳಿಕೆಯಾಗಿ ಪ್ರತಿ ಬ್ಯಾರೆಲ್ಗೆ 36.61 ಡಾಲರ್ ತಲುಪಿದೆ.