

ನವದೆಹಲಿ: ಟಿವಿಗಳ ತಯಾರಿಕೆಗೆ ಪ್ರಮುಖವಾಗಿ ಬಳಸುವ ಓಪನ್ ಸೆಲ್ ಪ್ಯಾನೆಲ್ಗಳ ಮೇಲಿನ ಶೇಕಡ 5 ಆಮದು ಸುಂಕಕ್ಕೆ ಕಳೆದ ವರ್ಷದಿಂದ ನೀಡಲಾಗಿದ್ದ ವಿನಾಯಿತಿ ಅವಧಿ ಈ ತಿಂಗಳ ಕೊನೆಯಲ್ಲಿ ಮುಕ್ತಾಯವಾಗುವುದರಿಂದ ಟಿವಿಗಳ ಬೆಲೆ ಅಕ್ಟೋಬರ್ನಿಂದ ಏರಿಕೆಯಾಗುವ ಸಾಧ್ಯತೆ ಇದೆ.
ಓಪನ್ ಸೆಲ್ ಪ್ಯಾನೆಲ್ಗಳ ಬೆಲೆ ಈಗಾಗಲೇ ಶೇಕಡ 50 ಹೆಚ್ಚಾಗಿರುವುದರಿಂದ ಒತ್ತಡದಲ್ಲಿರುವ ಟಿವಿ ಉದ್ಯಮ ಕೇಂದ್ರದ ನಿರ್ಧಾರದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. 32 ಇಂಚಿನ ಓಪನ್ ಸೆಲ್ ಪ್ಯಾನೆಲ್ ಬೆಲೆ 34 ಡಾಲರ್ನಿಂದ 60 ಡಾಲರ್ಗೆ ಏರಿಕೆಯಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಆಮದು ಸುಂಕದ ವಿನಾಯಿತಿ ಅವಧಿಯನ್ನು ವಿಸ್ತರಿಸುವ ಪರವಾಗಿದೆ ಎಂದು ತಿಳಿದುಬಂದಿದೆ.