ತೈಲ ಬೆಲೆ ಸತತ 4ನೇ ದಿನ ಏರಿಕೆ

petrole price
petrol pump
Published on

ನವದೆಹಲಿ: ಸತತ ನಾಲ್ಕನೇ ದಿನವೂ ತೈಲ ಬೆಲೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್​ಗೆ 40 ಪೈಸೆ, ಡೀಸೆಲ್​ಗೆ 45 ಪೈಸೆ ಹೆಚ್ಚಿಸಲಾಗಿದೆ. ಈ ಮೂಲಕ ಕಳೆದ ನಾಲ್ಕು ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಒಟ್ಟು 2.14 ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 2.23 ರೂ. ಹೆಚ್ಚಿಸಲಾಗಿದೆ. ಪರಿಷ್ಕೃತ ದರದ ಪ್ರಕಾರ ದೆಹಲಿಯಲ್ಲಿ ಬುಧವಾರ ಪೆಟ್ರೋಲ್ ಬೆಲೆ 73.40 ರೂ., ಡೀಸೆಲ್ ಬೆಲೆ 71.62 ರೂ.ಗೆ ಏರಿಕೆಯಾಗಿದೆ.

ಲಾಕ್​ಡೌನ್ ಕಾರಣ ಜಾಗತಿಕವಾಗಿ ಕಳೆದ ಮೂರು ತಿಂಗಳ ಹಿಂದೆ ಕಚ್ಚಾತೈಲಕ್ಕೆ ಬೇಡಿಕೆ ಕುಸಿದ ಹಿನ್ನೆಲೆ ತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗಿತ್ತು. ಆದರೆ ಸರ್ಕಾರ ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಮಾ.14ರಂದು ಪ್ರತಿ ಲೀಟರ್ ತೈಲ ಬೆಲೆ ಮೇಲೆ 3 ರೂ. ಹೆಚ್ಚುವರಿ ಸುಂಕ ವಿಧಿಸಿತ್ತು. ಇದಾದ 82 ದಿನಗಳ ಬಳಿಕ ತೈಲ ದರದ ನಿತ್ಯ ಪರಿಷ್ಕರಣೆ ಮತ್ತೆ ಆರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net