More

    80 ವರ್ಷಗಳಲ್ಲಿ ಆಗದ್ದು ಮೂರೇ ತಿಂಗಳಲ್ಲಿ ಸಾಧ್ಯವಾಯ್ತು; ಎಲ್ಲವೂ ಲಾಕ್​ಡೌನ್​ ಮಹಿಮೆ

    ನವದೆಹಲಿ: ಕಳೆದ ಎಂಬತ್ತು ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಕೇವಲ ಮೂರು ತಿಂಗಳಲ್ಲಿ ಸಾಧಿಸಿ ಬೀಗಿದೆ ಈ ಕಂಪನಿ. ಎಲ್ಲರಿಗೂ ಲಾಕ್​ಡೌನ್​ ಅವಧಿ ಸಂಕಷ್ಟದ ಕಾಲವಾಗಿದ್ದರೆ, ಈ ಕಂಪನಿ ಮಾತ್ರ ಭಾರಿ ಲಾಭ ಗಳಿಸಿದೆ.

    ಲಾಕ್​ಡೌನ್​ ಅವಧಿಯಲ್ಲಿ ಅಗತ್ಯ ವಸ್ತುಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಂತೆಯೇ ಆಹಾಋ ಉತ್ಪಾದನೆ ಕಾರ್ಖಾನೆಗಳ ಮೇಲೆ ಯಾವುದೇ ನಿರ್ಬಂಧವಿರಲಿಲ್ಲ. ಹೀಗಾಗಿ ಬಿಸ್ಕೆಟ್​ ಉತ್ಪಾದನೆ ಕಾರ್ಖಾನೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದವು. ಈ ಅವಧಿಯಲ್ಲಿ ಭಾರಿ ಬೇಡಿಕೆ ಗಳಿಸಿದ್ದು, ಪಾರ್ಲೆ ಕಂಪನಿ.

    ಇದನ್ನೂ ಓದಿ; ಹೊತ್ತಿ ಉರಿಯುತ್ತಿರುವ ತೈಲ ಬಾವಿ ಬೆಂಕಿ ನಂದಿಸಲು ಒಂದು ತಿಂಗಳೇ ಬೇಕು….! 

    ಈ ಕಂಪನಿಯ ಪಾರ್ಲೆ-ಜಿ ಬಿಸ್ಕೆಟ್​ ಹೊಸ ದಾಖಲೆಯನ್ನೇ ಬರೆದಿದೆ. ಕಂಪನಿ 80 ವರ್ಷಗಳಲ್ಲಿಯೇ ಅತಿ ಹೆಚ್ಚು ಮಾರಾಟವನ್ನು ಲಾಕ್​ಡೌನ್​ ಅವಧಿಯ ಮೂರು ತಿಂಗಳಲ್ಲಿ ಮಾಡಿದೆ. ಒಟ್ಟಾರೆ ಬಿಸ್ಕೆಟ್​ ಮಾರಾಟದಲ್ಲಿ ಶೇ.80-90 ಪಾರ್ಲೆ-ಜಿ ಪಾಲು ಹೊಂದಿದೆ.

    ಕೆಜಿಗೆ 100 ರೂ. ಆಸುಪಾಸಿನ ಬೆಲೆ ಹೊಮದಿರುವ ಪಾರ್ಲೆ-ಜಿ ಜನಸಾಮಾನ್ಯರ ಬಿಸ್ಕೆಟ್​ ಎಂದೇ ಹೆಸರಾಗಿದೆ. ಲಾಕ್​ಡೌನ್​ ಅವಧಿಯಲ್ಲಿ ಊಟಕ್ಕೆ ಪರದಾಡಿದವರು ಈ ಬಿಸ್ಕೆಟ್​ ತಂದೇ ಕಾಲ ಕಳೆದಿದ್ದಾರೆ. ಹಲವು ರಾಜ್ಯ ಸರ್ಕಾರಗಳು ಕೂಡ ಬೇಡಿಕೆ ಸಲ್ಲಿಸಿದ್ದವು. ಕೆಲ ಸರ್ಕಾರೇತರ ಸಂಸ್ಥೆಗಳು ಕೂಡ ದೊಡ್ಡ ಪ್ರಮಾಣದಲ್ಲಿ ಈ ಬಿಸ್ಕೆಟ್​ ಖರೀದಿಸಿವೆ ಎಂದು ಪಾರ್ಲೆ ಉತ್ಪನ್ನಗಳ ವರ್ಗೀಕರಣ ಮುಖ್ಯಸ್ಥ ಮಯಾಂಕ್​ ಷಾ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ; ಕರೊನಾದಿಂದ ಕಾಪಾಡುತ್ತಿರುವ ಔಷಧಗಳಿವು; ಬೆಲೆ ಕೇಳಿದರೆ ತಲೆ ತಿರುಗುತ್ತೆ…! 

    ದೇಶದ 130 ಕಡೆಗಳಲ್ಲಿ ಪಾರ್ಲೆ ಉತ್ಪಾದನಾ ಘಟಕಗಳನ್ನು ಹೊಂದಿದೆ. ಅದರಲ್ಲಿ ಸ್ಥಳಗಳಲ್ಲಿ ಸ್ವಂತ ಕಾರ್ಖಾನೆಗಳಿವೆ. ಲಾಕ್​ಡೌನ್​ ಅವಧಿಯಲ್ಲಿ ಬಿಸ್ಕೆಟ್​ ಪೂರೈಕೆಗಾಗಿ ವಿತರಣಾ ಜಾಲವನ್ನು ಕೇವಲ ಏಳು ದಿನಗಳಲ್ಲಿ ಸಂಪೂರ್ಣವಾಗಿ ಪರಿಷ್ಕರಿಸಿತ್ತು.

    ಹುಟ್ಟುಹಬ್ಬದಂದೇ ಕರೊನಾಗೆ ಬಲಿಯಾದ ಶಾಸಕ; ಜನಪ್ರತಿನಿಧಿ ಸಾವಿನ ಮೊದಲ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts