ಮಲಬಾರ್ ಗೋಲ್ಡ್ ದೇಶಾದ್ಯಂತ ಏಕರೂಪ ಬೆಲೆ

Malbar Logo
Published on

ಬೆಂಗಳೂರು: ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಿನ್ನ ಮತ್ತು ವಜ್ರದ ರೀಟೇಲ್ ಚೇನ್ ಆಗಿರುವ ಮಲಬಾರ್ ಗೋಲ್ಡ್ ಡೈಮಂಡ್ಸ್ ಕಂಪನಿ ದೇಶದ ಎಲ್ಲ ರಾಜ್ಯಗಳಲ್ಲೂ ಏಕರೂಪದ ಬೆಲೆಯಲ್ಲಿ ಚಿನ್ನ ಮಾರಾಟ ಮಾಡುವ ತನ್ನ ಬಹುನಿರೀಕ್ಷಿತ ‘ಒಂದು ಭಾರತ ಒಂದೇ ಚಿನ್ನದ ಬೆಲೆ (ಔಟಿಜ Mಟಿಜಚಿ ಔಟಿಜ ಉಠಟಜ ಖಚಿಣಜ) ಯೋಜನೆಗೆ ಚಾಲನೆ ನೀಡಿದೆ. ಗ್ರಾಹಕರು ಇನ್ನು ಮುಂದೆ ದೇಶದ ಯಾವುದೇ ರಾಜ್ಯದ ಮಲಬಾರ್ ಶೋರೂಂಗಳಲ್ಲಿ ಒಂದೇ ಬೆಲೆಯಲ್ಲಿ ಚಿನ್ನ ಖರೀದಿಸಬಹುದು. ಗ್ರಾಹಕರಿಗೆ ಆಗುತ್ತಿದ್ದ ಬೆಲೆ ವ್ಯತ್ಯಾಸ ಮತ್ತು ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ಮಲಬಾರ್ ಈ ಉಪಕ್ರಮ ಜಾರಿಗೆ ತಂದಿದೆ.

ಜಗತ್ತಿನ ಎಲ್ಲ ದೇಶಗಳಿಗೆ ಒಂದೇ ರೀತಿಯ ಕಸ್ಟಮ್ಸ್​  ಸುಂಕ ಮತ್ತು ತೆರಿಗೆಯನ್ನು ವಿಧಿಸಲಾಗುತ್ತಿದೆ. ಆದರೆ, ಭಾರತದಲ್ಲಿ ಮಾತ್ರ ಚಿನ್ನದ ದರ ಬೇರೆ ಬೇರೆ ರೀತಿ ಇದೆ. ಚಿನ್ನದ ಮಾರಾಟಕ್ಕೆಂದೇ ಮೀಸಲಾಗಿರುವ ಬ್ಯಾಂಕುಗಳಿಂದ ಚಿನ್ನವನ್ನು ಖರೀದಿಸಿದರೂ ಗ್ರಾಹಕರಿಗೆ ಮಾರಾಟ ಮಾಡುವಾಗ ದರದಲ್ಲಿ ವ್ಯತ್ಯಾಸವಾಗುತ್ತದೆ. ಗರಿಷ್ಠ ಪ್ರತಿ ಗ್ರಾಂಗೆ 400 ರೂ. ವ್ಯತ್ಯಾಸ ಕಂಡು ಬರುತ್ತದೆ. ಮಲಬಾರ್ ಗೋಲ್ಡ್ ಡೈಮಂಡ್ಸ್ ಕಳೆದ ಹಲವು ವರ್ಷಗಳಿಂದ ಈ ವಿಚಾರವನ್ನು ಗಂಭೀರವಾಗಿ ಅವಲೋಕಿಸಿ ದೇಶದಾದ್ಯಂತ ಇರುವ ಚಿನ್ನದ ಖರೀದಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಏಕರೂಪದ ದರವನ್ನು ನಿಗದಿಪಡಿಸುವ ನೀತಿಯನ್ನು ಸಿದ್ಧಪಡಿಸಿದೆ. ಇಂತಹ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ಸಂಸ್ಥೆಯಾಗಿದೆ. ಮಲಬಾರ್​ನ ಮತ್ತೊಂದು ಪ್ರಮುಖ ಅಂಶವೆಂದರೆ ದೇಶಾದ್ಯಂತ ಗ್ರಾಹಕರು ಎಲ್ಲಿಯೇ ಚಿನ್ನ ಖರೀದಿ ಮಾಡಿದ್ದರೂ ಆ ಚಿನ್ನವನ್ನು ಮಾರಾಟ ಮಾಡುವಾಗ ಬೈಬ್ಯಾಕ್ ಭರವಸೆ ನೀಡಿದೆ.

ಬಿಐಎಸ್ ಹಾಲ್​ವಾರ್ಕ್ ಚಿನ್ನ

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್​ನ ಭಾರತ ಕಾರ್ಯಾಚರಣೆಯ ವ್ಯವಸ್ಥಾಪಕ ನಿರ್ದೇಶಕ ಅಶರ್ ಒಟ್ಟಮೂಚಿಕ್ಕಲ್ ಮಾತನಾಡಿ, ಮಲಬಾರ್ ಗೋಲ್ಡ್ ಡೈಮಂಡ್ಸ್ ಸರ್ಕಾರದಿಂದ ಕಡ್ಡಾಯವಿಲ್ಲದಿದ್ದರೂ ತನ್ನ ಗ್ರಾಹಕರಿಗೆ ಶೇ.100ಕ್ಕೆ ನೂರರಷ್ಟು ಬಿಐಎಸ್ ಹಾಲ್​ವಾರ್ಕ್ ಚಿನ್ನದ ಆಭರಣಗಳನ್ನು ಕಳೆದ ಎರಡು ದಶಕಗಳಿಂದ ನೀಡುತ್ತಾ ಬಂದಿದೆ ಎಂದರು.

120 ಶೋರೂಂ

ಮಲಬಾರ್ ಗ್ರೂಪ್​ನ ಅಧ್ಯಕ್ಷ ಎಂ.ಪಿ ಅಹ್ಮದ್ ಮಾತನಾಡಿ, ಗುಣಮಟ್ಟ ಮತ್ತು ಶುದ್ಧತೆಯಲ್ಲಿ ಯಾವುದೇ ರಾಜಿ ಇಲ್ಲದೇ ಗ್ರಾಹಕರ ಹಿತಾಸಕ್ತಿ ರಕ್ಷಿಸುವುದು ನಮ್ಮ ಒನ್ ಇಂಡಿಯಾ ಒನ್ ಗೋಲ್ಡ್ ರೇಟ್ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ. ಮಲಬಾರ್​ನ ಏಕರೂಪದ ಚಿನ್ನದ ಬೆಲೆ ಯೋಜನೆಯನ್ನು ದೇಶದ ಎಲ್ಲ 120 ಶೋರೂಂಗಳಲ್ಲಿ ಅನುಷ್ಠಾನಕ್ಕೆ ತಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net