ಮಲ್ಲಿಗೆ ದರ ತೀವ್ರ ಇಳಿಕೆ

MALLIGE
Published on

ಉಡುಪಿ: ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಭೆ-ಸಮಾರಂಭಗಳನ್ನು ಸರ್ಕಾರ ನಿಷೇಧಿಸಿರುವ ಪರಿಣಾಮ ಮಲ್ಲಿಗೆ ಬೆಲೆ ತೀವ್ರ ಕುಸಿತವಾಗಿದೆ. ಮಂಗಳವಾರ ಮಾರುಕಟ್ಟೆಯಲ್ಲಿ ಬೇಡಿಕೆ ತೀವ್ರ ಕುಸಿದ ಪರಿಣಾಮ ಅಟ್ಟೆಗೆ ೧೭೦ ರೂಪಾಯಿಗೆ ಮಾರಾಟವಾಗಿದೆ. ಸೋಮವಾರ ಕಟ್ಟೆಯಲ್ಲಿ ೩೪೦ ರೂ. ನಿಗದಿ ಮಾಡಲಾಗಿತ್ತು. ಕಳೆದ ಒಂದು ವಾರದಿಂದ ಅಟ್ಟೆಗೆ ೫೦೦ ರೂಪಾಯಿಗಿಂತ ಕಡಿಮೆಯಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net