ಅಡಿಕೆ ಬೆಳೆಗಾರರಿಗೂ ತಟ್ಟಿದ ಕರೊನಾ ಬಿಸಿ; ಕೆಂಪಡಕೆ ದರದಲ್ಲಿ 3 ಸಾವಿರ ರೂ. ಇಳಿಕೆ

areca
Published on

ಶಿರಸಿ: ಇತ್ತೀಚಿನ ವರ್ಷಗಳ ಅಡಕೆ ಇತಿಹಾಸದಲ್ಲಿ ಕೆಂಪಡಕೆ (ರಾಶಿ)ಗೆ ಉತ್ತಮ ಧಾರಣೆ ಬಂದಿತ್ತು. ಆದರೀಗ ಕರೊನಾ ಕಂಟಕದಿಂದ ಬೆಲೆಯಲ್ಲಿ ದಿಢೀರ್ 3 ಸಾವಿರ ರೂಪಾಯಿ ಇಳಿಕೆಯಾಗಿ ಬೆಳೆಗಾರರು ಕಂಗಾಲಾಗುವಂತಾಗಿದೆ. ಯಲ್ಲಾಪುರದಲ್ಲಿ ಕೆಂಪಡಕೆ ವಾರದ ಹಿಂದೆ ಕ್ವಿಂಟಾಲ್ ಒಂದಕ್ಕೆ ಗರಿಷ್ಠ 45 ಸಾವಿರ ರೂ. ಗಡಿ ದಾಟಿತ್ತು. ಶಿರಸಿ ಮಾರುಕಟ್ಟೆಯಲ್ಲಿ 43 ಸಾವಿರ ರೂ., ಸಿದ್ದಾಪುರ ಮಾರುಕಟ್ಟೆಯಲ್ಲಿ 40 ಸಾವಿರ ರೂಪಾಯಿ ಗಡಿ ದಾಟಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಈಗ ಕೆಂಪಡಕೆ ದರ ಹಿಮ್ಮುಖವಾಗಿದೆ. 2014-15ರಲ್ಲಿ ಕೆಂಪಡಕೆ ಕ್ವಿಂಟಾಲ್​ಗೆ 81 ಸಾವಿರ ರೂ. ಗಡಿ ದಾಟಿತ್ತು. 2017ರಲ್ಲಿ 49 ಸಾವಿರ ರೂ.ಗೆ ಕುಸಿದಿತ್ತು. 2018 ಹಾಗೂ 2019ರಲ್ಲಿ ಸರಾಸರಿ 32 ಸಾವಿರ ರೂ. ಗರಿಷ್ಠ ದರ ಲಭಿಸಿತ್ತು. ಮಾ. 11ರಂದು ಕ್ವಿಂಟಾಲ್ ಕೆಂಪಡಕೆಗೆ ಕನಿಷ್ಠ 38,599 - ಗರಿಷ್ಠ 41,199 ರೂ. ಇರುವುದು ಇಳಿಮುಖವಾಗುತ್ತ ಕ್ರಮೇಣ ಮಾ.13ರಂದು ಕನಿಷ್ಠ 36,558- ಗರಿಷ್ಠ 39,599, 14ರಂದು ಕನಿಷ್ಠ 35,518- ಗರಿಷ್ಠ 39,408, 16ರಂದು ಕನಿಷ್ಠ 36089-ಗರಿಷ್ಠ 38658 ರೂ. ದರ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net