

ಬೆಂಗಳೂರು: ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(ಐಒಸಿಎಲ್) ಈಗಾಗಲೇ ಆರಂಭಿಸಿರುವ ‘ವೃಕ್ಷದ ಮೆರುಗು’( ಟ್ರೀ ಚೀರ್ಸ್) ಕಾರ್ಯಕ್ರಮ ನ.16ರವರೆಗೆ ನಡೆಯಲಿದೆ.
ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗಳಲ್ಲಿ ನೂತನ ವಾಹನಗಳಿಗೆ ಇಂಧನ ತುಂಬಿಸುವ ಮಾಲೀಕರ ಪರವಾಗಿ ಒಂದೊಂದು ಸಸಿ ನಡೆಲಿದೆ. ಜತೆಗೆ, ಎಕ್ಸ್ ಟ್ರಾ ಡಿವಾರ್ಡ್ಸ್‌ಗೆ ಬೋನಸ್ ಅಂಕ ಸಹಿತ ಉಚಿತ ಸದಸ್ಯತ್ವ ನೀಡಲಿದೆ. ನೂತನ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು ಬಂಕ್‌ಗಳಿಗೆ ಬರುವ ಸಂದರ್ಭದಲ್ಲಿ ಸಿಬ್ಬಂದಿ ಸ್ವಾಗತಿಸಲಿದ್ದಾರೆ. ಅವರಿಂದ ಮೊಬೈಲ್ ಸಂಖ್ಯೆ, ಹೆಸರು ಹಾಗೂ ವಾಹನದ ವಿವರ ಪಡೆದು ವೃಕ್ಷ ಮೆರುಗು ನೋಂದಣಿಯ ಸಂದೇಶ ಕಳುಹಿಸಲಾಗುತ್ತದೆ. ನೋಂದಾಯಿತ ಗ್ರಾಹಕರಿಗೆ ಸಸಿ ನೆಟ್ಟಿರುವ ಮತ್ತೊಂದು ಸಂದೇಶ ಬರುತ್ತದೆ ಎಂದು ಐಒಸಿಎಲ್ ಅಧ್ಯಕ್ಷ ಎಸ್.ಎಂ. ವೈದ್ಯ ತಿಳಿಸಿದ್ದಾರೆ.
80 ಸಾವಿರಕ್ಕೂ ಹೆಚ್ಚು ಸಸಿ ನೆಟ್ಟಿದೆ: ಪರಿಸರ ಪ್ರಜ್ಞೆಯುಳ್ಳ ಸಾಂಸ್ಥಿಕ ಸಂಸ್ಥೆಯಾಗಿರುವ ಐಒಸಿಎಲ್ ಈ ಹಿಂದೆ ನಗರ ಅರಣ್ಯೀಕರಣದ ಉಪಕ್ರಮವನ್ನು ಪ್ರಾರಂಭಿಸಿತ್ತು. ಇದಕ್ಕೆ ನಗರದ ಶ್ವಾಸಕೋಶ ಎಂದು ಹೆಸರಿಡಲಾಗಿತ್ತು. ಹಲವು ನಗರಗಳ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಉದ್ಯಾನವನಗಳಲ್ಲಿ ಕಿರು ಅರಣ್ಯ ಅಭಿವೃದ್ಧಿಪಡಿಸಲು ಮಿಯಾವಾಕಿಯ ನಗರ ಅರಣ್ಯೀಕರಣದ ವಿಧಾನವನ್ನು ಅಳವಡಿಸಿಕೊಂಡಿತ್ತು. 2019-20ರಲ್ಲಿ 80 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ದೇಶದ 13 ನಗರಗಳಲ್ಲಿ ನಗರದ ಶ್ವಾಸಕೋಶ ರೂಪಿಸಿತ್ತು ಎಂದಿದ್ದಾರೆ.