

ಕರೊನಾ ಸೋಂಕಿನ ಕಾರಣ ವ್ಯಾಪಾರ- ಉದ್ಯಮ ಬಂದ್ ಆಗಿರುವುದರಿಂದ ಭಾರತದ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಭಾರಿ ಇಳಿಕೆಯಾಗಲಿದೆ. 2020-21ರ ವರ್ಷದಲ್ಲಿ ಶೇ. 1.5ರಿಂದ 2.8ರೊಳಗೆ ಇರಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಈ ಮೂಲಕ ಭಾರತದ ಪ್ರಗತಿ ದರ ಮೂರು ದಶಕದಷ್ಟು ಹಿಂದಿನ ಮಟ್ಟಕ್ಕೆ ತಲುಪಲಿದೆ ಎಂದು ಅಭಿಪ್ರಾಯಪಟ್ಟಿದೆ.
ಜಾಗತಿಕರಣದ (1991) ಸಮಯದಲ್ಲಿ ಭಾರತದ ಪ್ರಗತಿ ದರ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿತ್ತು.ಮಾ. 31ಕ್ಕೆ ಕೊನೆಗೊಂಡ 2019-20ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ. 4.8ರಿಂದ 5ಕ್ಕೆ ಚೇತರಿಸಿಕೊಂಡಿದೆ. ಆರ್ತಿಕ ಮಂದಗತಿ ಜತೆಗೆ ಲಾಕ್ಡೌನ್ನ ದುಷ್ಪರಿಣಾಮ ಸೇರಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಡಿಪಿ ಗಣನೀಯವಾಗಿ ಇಳಿಮುಖವಾಗಲಿದೆ ಎಂದು ದಕ್ಷಿಣ ಏಷ್ಯಾ ಆರ್ಥಿಕ ಮುನ್ನೋಟದ ವರದಿಯಲ್ಲಿ ತಿಳಿಸಿದೆ.