

ನವದೆಹಲಿ: ಜಪಾನ್ ಮೂಲದ ಪ್ರಮುಖ ಕಾರು ಉತ್ಪಾದಕ ಕಂಪನಿ ಹೋಂಡಾ ಬುಧವಾರ ಹೊಚ್ಚ ಹೊಸ ಹೋಂಡಾ ಜಾಝ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಪ್ಡೇಟ್ ಆಗಿರುವ ಹ್ಯಾಚ್ಬ್ಯಾಕ್ ಇದಾಗಿದ್ದು, V, VX ಮತ್ತು ZX ಎಂಬ ಮೂರು ಮಾದರಿಯಲ್ಲಿ ಮತ್ತು ಎರಡು ಟ್ರಾನ್ಸ್ಮಿಷನ್ ಆಯ್ಕೆಗಳಲ್ಲಿ ಲಭ್ಯವಿದೆ.
ಜಾಝ್ V MT ಇದರಲ್ಲಿ ಆರಂಭಿಕ ವೇರಿಯಂಟ್ ಆಗಿದ್ದು 7.49 ಲಕ್ಷ ರೂಪಾಯಿ ಬೆಲೆ ಇದ್ದರೆ, ZX CVT ವೇರಿಯೆಂಟ್ ಬೆಲೆ 9.73 ಲಕ್ಷ ರೂಪಾಯಿ ಇದೆ. ಹೋಂಡಾ ಇತ್ತೀಚೆಗಷ್ಟೇ ಐದನೇ ತಲೆಮಾರಿನ ಹೋಂಡಾ ಸಿಟಿ ಮತ್ತು ಫೇಸ್ಲಿಫ್ಟ್ ಮಾಡಿದ WR-V ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.
ಹೊಸ ಜಾಝ್ ಗೆ ಬುಕ್ಕಿಂಗ್ ಆರಂಭವಾಗಿದ್ದು, 21,000 ರೂಪಾಯಿ ಟೋಕನ್ ಅಡ್ವಾನ್ಸ್ ಕೊಟ್ಟು ಮುಂಗಡ ಕಾಯ್ದಿರಿಸಕೊಳ್ಳಬಹುದಾಗಿದೆ. ಹೊಸ ಜಾಝ್ ಬಿಎಸ್ 6 ಮಾದರಿಯದ್ದಾಗಿದ್ದು, 1.2 ಲಿಟರ್ i-VTEC ಪೆಟ್ರೋಲ್ ಎಂಜಿನ್ ಹೊಂದಿದೆ. ಸ್ಟೈಲಿಶ್ ಲುಕ್ ಹೊಂದಿರುವ ಜಾಝ್, ಮಾರುತಿ ಬಲೆನೋ ಮತ್ತು ಹ್ಯುಂಡೈ ಎಲೈಟ್ ಐ20ಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. (ಏಜೆನ್ಸೀಸ್)