ಎಚ್​ಸಿಎಲ್ ಟೆಕ್ನಾಲಜಿ ಚೇರ್​ಮನ್ ಹುದ್ದೆ ತ್ಯಜಿಸಿದ ಶಿವ್ ನಾಡಾರ್

roshini-nadar and Shiv nadar
Published on

ಮುಂಬೈ: ಐಟಿ ಕ್ಷೇತ್ರದ ಮುಂಚೂಣಿ ಸಂಸ್ಥೆಗಳಲ್ಲಿ ಒಂದಾದ ಎಚ್​ಸಿಎಲ್ ಟೆಕ್ನಾಲಜಿಯ ಚೇರ್​ಮನ್​ ಸ್ಥಾನವನ್ನು ಶಿವ್ ನಾಡಾರ್ ತ್ಯಜಿಸಿರುವುದಾಗಿ ಕಂಪನಿ ಇಂದು ಘೋಷಿಸಿದೆ. ಅವರ ಸ್ಥಾನವನ್ನು ರೋಶನಿ ನಾಡಾರ್ ಮಲ್ಹೋತ್ರಾ ತುಂಬಿದ್ದಾರೆ. ರೋಶನಿ ನಾಡಾರ್ ಮಲ್ಹೋತ್ರಾ ಕಂಪನಿಯ ನಾನ್​-ಎಕ್ಸಿಕ್ಯೂಟಿವ್​ ಡೈರೆಕ್ಟರ್​ ಆಗಿದ್ದಾರೆ.

ರೋಶನಿ ನಾಡಾರ್ ಅವರು ಶಿವ್ ನಾಡಾರ್ ಅವರ ಒಬ್ಬಳೇ ಮಗಳು. 2019ರಲ್ಲಿ ಅವರು ಫೋರ್ಬ್ಸ್​ ವರ್ಲ್ಡ್​ನ 100 ಅತಿ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 54ನೇ ಸ್ಥಾನದಲ್ಲಿದ್ದರು. ಐಐಎಫ್​ಎಲ್​ ವೆಲ್ತ್​ ಹುರುನ್ ಇಂಡಿಯಾ ರಿಚ್​ ಲಿಸ್ಟ್​ (2019)ರ ಪ್ರಕಾರ ದೇಶದ ಅತಿ ಶ್ರೀಮಂತ ಮಹಿಳೆಯ ಪಟ್ಟಿಯಲ್ಲಿದ್ದರು. ರೋಶನಿ ನಾಡಾರ್ ಪತಿ ಶಿಖರ್ ಮಲ್ಹೋತ್ರಾ ಎಚ್​ಸಿಎಲ್​ ಹೆಲ್ತ್​ಕೇರ್​ನಲ್ಲಿ ವೈಸ್​ ಚೇರ್​ಮನ್​ ಆಗಿದ್ದಾರೆ. ಈ ದಂಪತಿಗೆ ಆರ್ಮನ್​ ಮತ್ತು ಜಾಹಾನ್ ಎಂಬ ಇಬ್ಬರು ಪುತ್ರರಿದ್ದಾರೆ.

ಇಂದಿನಿಂದ ಶಿವ್ ನಾಡಾರ್ ಕಂಪನಿಯ ಚೀಫ್​ ಸ್ಟ್ರಾಟಜಿ ಆಫೀಸರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಆದಾಗ್ಯೂ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಶಿವ್ ನಾಡಾರ್ ಮುಂದುವರಿಯಲಿದ್ದಾರೆ ಎಂದು ಕಂಪನಿ ಹೇಳಿದೆ. ಬ್ಲೂಮ್​ಬರ್ಗ್​ ಬಿಲಿಯನೇರ್ಸ್ ಸೂಚ್ಯಂಕ ಪ್ರಕಾರ, ಶಿವ್​ ನಾಡಾರ್​ ಜಗತ್ತಿನ 81ನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದು, ಅವರ ಸಂಪತ್ತಿನ ಮೌಲ್ಯ 16.3 ಶತಕೋಟಿ ರೂಪಾಯಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net